ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 25.50 ರೂ. ಏರಿಸಲಾಗಿದೆ. ಸತತ 2ನೇ ತಿಂಗಳು ಗ್ಯಾಸ್ ಸಿಲಿಂಡರ್ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಇಂಧನ ಕಂಪನಿಗಳು 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ದರ 25 ರೂ. ಏರಿಸಿವೆ. ಇದರಿಂದ ಸಿಲಿಂಡರ್ ದರ ರಾಜಧಾನಿ ದೆಹಲಿಯಲ್ಲಿ 859 ರೂ.ಗೆ ಜಿಗಿತ ಕಂಡಿದೆ.
ಜುಲೈ 1ರಂದು ತೈಲ ಕಂಪನಿಗಳು 25 ರೂ. ಏರಿಕೆ ಮಾಡಿದ್ದವು. ಇದೀಗ ಮತ್ತೆ 25 ರೂ. ದರ ಏರಿಸಿವೆ. ಇದರಿಂದ ಕಳೆದ 2 ತಿಂಗಳಲ್ಲಿ 50 ರೂ. ಏರಿಕೆಯಾದಂತಾಗಿದೆ. ಒಟ್ಟಾರೆ ಈ ವರ್ಷದಲ್ಲಿ 165 ರೂ. ದರ ಏರಿಕೆಯಾಗಿದೆ.