ನವದೆಹಲಿ : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ. ಗಾಂಧಿ ಮರಿಮೊಮ್ಮಗಳಾದ ಆಶಿಶ್ ಲತಾ ರಾಮ್‌ಗೋಬಿನ್ (56) ಶಿಕ್ಷೆಗೊಳಗಾದವರು. ಇವರನ್ನು ನ್ಯಾಯಾಲಯ ಸೋಮವಾರ ತಪ್ಪಿತಸ್ಥರೆಂದು ಪರಿಗಣಿಸಿದೆ.
6 ಮಿಲಿಯನ್ ರಾಂಡ್ ಮೌಲ್ಯದ (3 ಕೋಟಿ ರೂ.ಗೂ ಹೆಚ್ಚು) ವಂಚನೆ ಮತ್ತು ನಕಲಿ ಸಹಿಯ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ದಕ್ಷಿಣ ಆಫ್ರಿಕಾದ ಡರ್ಬನ್ ಕೋರ್ಟ್ ಆಕೆಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಭಾರತದಿಂದ ಅಕ್ರಮವಾಗಿ ಸಾಗಾಟಕ್ಕೆ ಅನುವಾಗಲು ಆಮದು ಮತ್ತು ಕಸ್ಟಮ್ಸ್ ಸುಂಕವನ್ನು ತೆರವುಗೊಸುವ ಬಗ್ಗೆ ಉದ್ಯಮಿ ಎಸ್.ಆರ್. ಮಹಾರಾಜ್ ಅವರಿಗೆ ಲಾಭದ ಪಾಲು ನೀಡುವ ಭರವಸೆ ನೀಡಿದ ಆರೋಪ ಆಕೆಯ ಮೇಲಿದೆ.