ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಮೃತಪಟ್ಟ ಸಂದರ್ಭದಲ್ಲಿ ಅವರ ಪಾರ್ಥೀವ ಶರೀರ ದಫನ ಮಾಡಲು ದೆಹಲಿಯಲ್ಲಿ ಜಾಗ ಕೊಟ್ಟಿರಲಿಲ್ಲ ಎಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಎನ್. ಮಹೇಶ್ ಪ್ರಸ್ತಾಪಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಚಾರ ಉಲ್ಲೇಖ ಮಾಡಿದ ಎನ್. ಶಾಸಕ ಮಹೇಶ್ ಅಂಬೇಡ್ಕರ್ ಸಾವಿನ ನಂತರ ಅಂದಿನ ಕಾಂಗ್ರೆಸ್ ಸರ್ಕಾರ ಅವರ ಪಾರ್ಥೀವ ಶರೀರವನ್ನ ದಫನ್ ಮಾಡಲು ದೆಹಲಿಯಲ್ಲಿ ಜಾಗ ನೀಡಿರಲಿಲ್ಲ. ಕೊನೆಗೆ ಮುಂಬೈಗೆ ತಂದು ಸಮುದ್ರದ ದಡದಲ್ಲಿ ದಫನ ಮಾಡಲಾಯಿತು.
ಸಾಮಾನ್ಯವಾಗಿ ಸಮುದ್ರದ ದಡದಲ್ಲಿ ಅನಾಥ ಶವಗಳನ್ನು ದಫನ ಮಾಡಲಾಗುತ್ತೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಎನ್ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಹೆಸರು ಹೇಳದೆ ಇದ್ದರೆ ರಾಜಕಾರಣ ಮಾಡಲು ಆಗಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಆದರೆ ಅಂಬೇಡ್ಕರ್ ಗೆ ಸಲ್ಲಬೇಕಾದ ಗೌರವವನ್ನು ಪ್ರಧಾನಿ ಮೋದಿ ಮಾತ್ರ ಕೊಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಆಡಳಿತದ ಅವಧಿಯಲ್ಲಿ ಅಂಬೇಡ್ಕರ್ ಸಿಗಬೇಕಾದ ಪ್ರಾಶಸ್ತ್ಯ ಸಿಕ್ಕಿತ್ತು ನಂತರ ಅಂಬೇಡ್ಕರರಿಗೆ ಗೌರವವನ್ನ ಪ್ರಧಾನಿ ಮೋದಿ ಬಂದ ಮೇಲೆ ಅದೇ ರೀತಿಯ ಪ್ರಾಶಸ್ತ್ಯ ಸಿಕ್ಕಿದೆ ಎಂದು ಹೇಳಿದ್ರು.
0 89 Less than a minute