ಬೆಂಗಳೂರಿನಲ್ಲಿ ರಾತ್ರಿ 9 ಗಂಟೆಯವರೆಗೆ ಮಾಲ್ ಗಳು ಓಪನ್ ಗೆ ಅವಕಾಶ ಕೊಡಲಾಗಿದೆ. ಲಾಕ್ ಡೌನ್ ಹಿನ್ನೆಲೆ ಮಾಲ್ ಗಳಿಗೆ ಬಿದ್ದಿದ್ದ ಬೀಗ ಸಡಿಲಿಕೆ ಬಳಿಕ ತೆರವುವಾಗಿದ್ದು, ಶೇ.100 ರಷ್ಟು ಸಿಬ್ಬಂದಿಗಳೊಂದಿಗೆ ಮಾಲ್ ಗಳು ಓಪನ್ ಆಗಲಿದೆ.ನಾಳೆಯಿಂದ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆತನಕ ಓಪನ್ ಇರುತ್ತೆ.ಇಂದು ಸ್ವಚ್ಚತಾ ಕಾರ್ಯದಲ್ಲಿ ಮಾಲ್ ಸಿಬ್ಬಂದಿಗಳು ತೊಡಗಿದ್ದಾರೆ.
ಕೊರೊನಾ ನಿಯಮಾವಳಿಗಳನ್ನು ಪಾಲಿಸುವಂತೆ ಗರುಡಾ ಮಾಲ್ ಪ್ರವೇಶ ದ್ವಾರ ಮುಂದೆ ಸೂಚನಫಲಕವನ್ನ ಮಾಲ್ ನ ಸಿಬ್ಬಂದಿಗಳು ಹಾಕಿದ್ದಾರೆ. ಮಾಲ್ ಗೆ ಬರುವ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡಲಾಗಿದೆ.
ಗ್ರಾಹಕರು ಸಾಧ್ಯವಾದಷ್ಟು ಕಾರ್ಡ್ ಲೆಸ್ ವ್ಯವಹಾರ ಬಳಸಲು ಸಲಹೆ ಕೊಡಲಾಗಿದೆ. ಅಷ್ಟೇ ಅಲ್ಲದೆ ಆರೋಗ್ಯ ಸೇತು ಬಳಸಲು ಮನವಿ ಸಹ ಮಾಡಲಾಗಿದೆ.2 ಮೀಟರ್ ಅಂತರ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದ್ದು,ಗುಂಪು ಸೇರದಂತೆ ಕೊರೊನಾ ನಿಯಮಾವಳಿ ಪಾಲಿಸಲು ಮನವಿ ಮಾಡಲಾಗಿದೆ.