ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದ್ದರೂ, ಮುಂಬರುವ ರಾಷ್ಟ್ರಪತಿ ಚುನಾವಣೆ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದೆ.ಈ ಚುನಾವಣೆಯಲ್ಲಿ ಗೆಲುವು ಕಾಣುವುದು ಬಿಜೆಪಿಗೆ ಸುಲಭವಲ್ಲ. ಏಕೆಂದರೆ ದೇಶಾದ್ಯಂತ ಪಕ್ಷವು ಒಟ್ಟು ಸಂಖ್ಯೆಯ ಅರ್ಧದಷ್ಟು ಕೂಡ ಶಾಸಕರನ್ನು ಹೊಂದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಮಮತಾ, “ಆಟ ಇನ್ನೂ ಮುಗಿದಿಲ್ಲ” ಎಂದು ಹೇಳಿದ್ದಾರೆ. ಈ ಬಾರಿ ರಾಷ್ಟ್ರಪತಿ ಚುನಾವಣೆ ಬಿಜೆಪಿಗೆ ಸುಲಭವಾಗಿಲ್ಲ. ದೇಶದ ಒಟ್ಟು ಶಾಸಕರಲ್ಲಿ ಅರ್ಧದಷ್ಟು ಸಂಖ್ಯೆಯನ್ನೂ ಅವರು ಹೊಂದಿಲ್ಲ. ದೇಶಾದ್ಯಂತ ವಿರೋಧ ಪಕ್ಷಗಳು ಸೇರಿಕೊಂಡರೆ ಹೆಚ್ಚಿನ ಶಾಸಕರನ್ನು ಹೊಂದಿವೆ” ಎಂದು ಹೇಳಿದ್ದಾರೆ. ರಾಷ್ಟ್ರಪತಿ ಚುನಾವಣೆಯು ಸಂಸತ್ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ಸದಸ್ಯರನ್ನು ಒಳಗೊಂಡ ಎಲೆಕ್ಟೊರಲ್ ಕಾಲೇಜ್ ಮೂಲಕ ಪರೋಕ್ಷವಾಗಿ ನಡೆಯುತ್ತದೆ. 776 ಸಂಸದರು ಮತ್ತು 4,120 ಶಾಸಕರನ್ನು ಹೊಂದಿರುವ ಎಲೆಕ್ಟ್ರೋರಲ್ ಕಾಲೇಜ್ ಮೂಲಕ ಭಾರತದ ರಾಷ್ಟ್ರಪತಿ ಆಯ್ಕೆ ನಡೆಯುತ್ತದೆ. ಎಲೆಕ್ಟೋರಲ್ ಕಾಲೇಜಿನ ಒಟ್ಟು ಸಂಖ್ಯಾಬಲ 10,98,903 ಮತಗಳಾಗಿದೆ
0 76 Less than a minute