ಹೊಸ ಎಟಿಎಂ ಕಾರ್ಡ್ ನೀಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ಒಂದು ಲಕ್ಷ ರೂ. ವಂಚಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣೇಗೌಡ ಎಂಬುವರ ಬ್ಯಾಂಕ್ ಖಾತೆಯಿಂದ ಹಣ ವಂಚಿಸಲಾಗಿದೆ. ಚಿಕ್ಕಮಗಳೂರು ಸೈಬರ್ ಕ್ರೈಮ್ ಠಾಣೆಗೆ ಕೃಷ್ಣೇಗೌಡರು ದೂರು ನೀಡಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ವಂಚಕ ಮೊಬೈಲಿಗೆ ಬಂದ ಓಟಿಪಿ ನಂಬರ್ ನೀಡುವಂತೆ ಹೇಳಿದ್ದು, ನಂಬರ್ ನೀಡಿದ ಕೆಲವೇ ಸೆಕೆಂಡ್ ಗಳಲ್ಲಿ ಕೃಷ್ಣೇಗೌಡರ ಖಾತೆಯಿಂದ 1 ಲಕ್ಷ ರೂ. ಡ್ರಾ ಮಾಡಲಾಗಿದೆ.