ಹಣಕಾಸಿನ ವಿಚಾರಕ್ಕೆ ಯುವಕನೊಬ್ಬನಿಗೆ ನಾಲ್ಕೈದು ಮಂದಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಆಚಾರ್ಯ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸೋಲದೇವನಹಳ್ಳಿ ರವಿಕುಮಾರ್ (28) ಮೃತ ಯುವಕ. ರವಿಕುಮಾರ್ ಎಂಬಿಎ ಪದವೀಧರನಾಗಿದ್ದು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಕೆಲವರು ಮಾತನಾಡುವ ಸಲುವಾಗಿ ರವಿಕುಮಾರ್‍ನನ್ನು ಶನಿವಾರ ಸಂಜೆ ಏಳು ಗಂಟೆ ಸುಮಾರಿಗೆ ಸೋಲದೇನವಹಳ್ಳಿಯ ಆಚಾರ್ಯ ಕಾಲೇಜು ಮೈದಾನಕ್ಕೆ ಕರೆಸಿಕೊಂಡಿದ್ದಾರೆ.
ದುಷ್ಕರ್ಮಿಗಳು ಮತ್ತು ರವಿಕುಮಾರ್ ನಡುವೆ ಮಾತಿನ ಚಕಮಕಿ ನಡೆದು ರವಿಕುಮಾರ್‍ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿದೆ. ಈ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಎರಡು ವಿಶೇಷ ಪೆÇಲೀಸ್ ತಂಡ ರಚಿಸಲಾಗಿದೆ ಎಂದು ಪೆÇಲೀಸರು ಹೇಳಿದರು.
ಪ್ರಾಥಮಿಕ ವಿಚಾರಣೆಯಲ್ಲಿ ಹಣಕಾಸಿನ ವಿಚಾರಕ್ಕೆ ರವಿಕುಮಾರ್‍ನನ್ನು ದುಷ್ಕರ್ಮಿಗಳು ಕರೆಸಿಕೊಂಡು ಹತ್ಯೆಗೈದಿದ್ದಾರೆ ಎಂಬ ಮಾಹಿತಿಯಿದೆ. ರವಿಕುಮಾರ್ ಮೊಬೈಲ್ ನೆಟ್‍ವರ್ಕ್, ಸಿಡಿಆರ್ ಪರಿಶೀಲಿಸಲಾಗುತ್ತಿದೆ ಎಂದು ಪೆÇಲೀಸರು ಹೇಳಿದರು.