ಪ್ರೀತಿಸಿದವಳ ಜೊತೆ ಮದುವೆ ಮಾಡದೇ ತಡ ಮಾಡುತ್ತಿದ್ದಾರೆ ಎಂದು ಸಿಟ್ಟಿಗೆದ್ದ ಯುವಕ ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ವಿಜಯಪುರದಲ್ಲಿ ನಡೆದಿದೆ.
ಮರಿಯಮ್ಮನಹಳ್ಳಿಯ ವೀರಭದ್ರೆಶ್ವರ ಟಾಕಿಸ್ ಬಳಿ ಈ ಘಟನೆ ನಡೆದಿದ್ದು, 23 ವರ್ಷದ ಚಿರಂಜೀವಿ ಗೋಸಂಗಿ ಎನ್ನುವ ಯುವಕ ಟವರ್ ಏರಿ ಕುಳಿತು ಜನರನ್ನು ಆತಂಕಕ್ಕೆ ದೂಡಿದ್ದಾನೆ.
ಪಕ್ಕದ ಮನೆಯ ಉಮಾ ಎಂಬ ಹುಡುಗಿಯನ್ನು ಚಿರಂಜೀವಿ ಗೋಸಂಬಿ ಪ್ರೀತಿಸುತ್ತಿದ್ದು, ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮದುವೆ ತಡವಾಗುತ್ತಿದೆ ಎಂದು ಸಿಟ್ಟಿಗೆದದ್ಉ ಟವರ್ ಏರಿ ಮನೆಯವರಿಗೆ ಧಮ್ಕಿ ಹಾಕಿದ್ದಾನೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಸಿಪಿಐ ವಸಂತ ವಿ ಅಸೋದೆ ನೇತೃತ್ವದಲ್ಲಿ 7 ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ಮದುವೆ ಮಾಡಿಸುವುದಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಮನವೊಲಿಕೆ ಹಿನ್ನೆಲೆಯಲ್ಲಿ ಟವರ್ ಮೇಲಿಂದ ಇಳಿದು ಬಂದ ಚಿರಜೀವಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.