ರೇಷನ್ ಕಿಟ್ ನೀಡುವ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆದು ಗನ್ ತೋರಿಸಿ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷಾ ಈ ನೀಚ ಕೃತ್ಯ ಎಸಗಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ಬಾಳ ಮೂಲದ ಯುವತಿಯನ್ನು ಮಾಡೆಲಿಂಗ್ ಜಾಬ್ ಕೊಡಿಸುವುದಾಗಿ ಹೇಳಿಕೊಂಡು ಫೆಸ್‌ಬುಕ್ ನಲ್ಲಿ ಪರಿಚಯ ಮಾಡಿಕೊಂಡ ಅಹಮದ್ ಪಾಷಾ, ಮೊಬೈಲ್ ನಂಬರ್ ಪಡೆದು ಜನರಿಗೆ ಪಡಿತರ ವಿತರಿಸುವ ಫೋಟೋಗಳನ್ನು ಕಳುಹಿಸಿ ನಂತರ ಬಣ್ಣದ ಮಾತುಗಳಿಂದ ಮಹಿಳೆಯ ನಂಬಿಕೆ ಗಿಟ್ಟಿಸಿಕೊಂಡಿದ್ದಾನೆ.
ನಿಮ್ಮಿಂದ ರೆಷನ್ ಕಿಟ್ ವಿತರಣೆ ಮಾಡಿಸಬೇಕು ಮನೆಗೆ ಬನ್ನಿ ಎಂದು ಶ್ಯಾನಭೋಗನಹಳ್ಳಿಯಿಂದ ಕ್ಯಾಬ್ ಬುಕ್ ಮಾಡಿಸಿ ಆಹ್ವಾನಿಸಿದ್ದ ಪಾಷಾ, ಯಾರೂ ಇಲ್ಲದ ಸಮಯದಲ್ಲಿ ಮಹಿಳೆಯನ್ನು ಕರೆದೊಯ್ದು, ಗನ್ ತೋರಿಸಿ ಹೆದರಿಸಿ ನಗ್ನ ಚಿತ್ರಗಳನ್ನು ತೆಗೆದು ನಂತರ ಅತ್ಯಾಚಾರ ಎಸಗಿದ್ದಾನೆ. ಪಾಷಾ ಇದೇ ರೀತಿ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪಿಗಳು ಕೇಳಿ ಬಂದಿವೆ.