ವಾಹನವೊಂದರಲ್ಲಿ ಬರುತ್ತಿದ್ದ ಮಹಿಳೆಯ ಚಿನ್ನಾಭರಣವನ್ನು ಕಳವುಗೈದ ಆರೋಪಿಯನ್ನು ಮಂಗಳೂರಿನ ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೂಲತಃ ಭದ್ರಾವತಿಯ ಪ್ರಸ್ತುತ ದಾಂಡೇಲಿಯ ನಿವಾಸಿ ಪಿ. ಜ್ಞಾನರತ್ನಂ ಕೃಪಾರಾವ್ (45) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ನವಭಾರತ್ ಸರ್ಕಲ್ ಬಳಿಯ ನಿವಾಸಿ ವಸಂತಾ ಎಂಬುವವರು ಮಾರ್ಚ್ 10ರಂದು ಭದ್ರಾವತಿಯಿಂದ ಮಂಗಳೂರಿಗೆ ವಾಹನವೊಂದರಲ್ಲಿ ಬರುತ್ತಿದ್ದಾಗ ಅವರ ಬಳಿ ಇದ್ದ ಚಿನ್ನಾಭರಣ ಇರುವ ಬ್ಯಾಗ್ ಕಳವಾಗಿತ್ತು. ಈ ಬಗ್ಗೆ ಮಹಿಳೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬ್ಯಾಗ್‌ನಲ್ಲಿ ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇತ್ತು. ಈ ಬಗ್ಗೆ ತನಿಖೆ ನಡೆಸಿದ ಕದ್ರಿ ಪೊಲೀಸರು ಆರೋಪಿ ಜ್ಞಾನರತ್ನಂ ಕೃಪಾರಾವ್‌ನನ್ನು ಬಂಧಿಸಿದ್ದಾರೆ. ಅಲ್ಲದೆ ಆತ ಹುಬ್ಬಳ್ಳಿ, ದಾಂಡೇಲಿ, ಭದ್ರಾವತಿಯ ಮಣಪ್ಪುರಂ, ಮುತ್ತೂಟ್, ಐಐಎಫ್‌ಸಿ ಫೈನಾನ್ಸ್‌ಗಳಲ್ಲಿ ಅಡವಿಟ್ಟಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.