ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ಮನೆಯ ಪಕ್ಕದ ಟವರ್ ಏರಿದ್ದು ಸಮಸ್ಯೆ ಬಗೆ ಹರಿಸದಿದ್ದರೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ನವಿಲೆ ಗ್ರಾಮದಲ್ಲಿ ವೆಂಕಟೇಶ್ ಎನ್ನುವ ವ್ಯಕ್ತಿ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸ್ತಿರೋ ವ್ಯಕ್ತಿಯಾಗಿದ್ದು, ಈತ ರಾತ್ರಿ ಮನೆಯಲ್ಲಿ ಪತ್ನಿಯ ಜೊತೆ ಆಸ್ತಿ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದು ಇಂದು ಮಾವನ ಮನೆಯವರು ಬಂದು ಸಮಸ್ಯೆ ಬಗೆಹರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಊರಿನ ಮುಖಂಡರು ಮನವೊಲಿಕೆಗೆ ಮುಂದಾದ್ರು ಆತ ತನ್ನ ಪಟ್ಟು ಬಿಡದೆ ಬೆಳಿಗ್ಗೆಯಿಂದ ಟವರ್ ಏರಿ ಕುಳಿತಿದ್ದಾನೆ. ಸುದ್ದಿ ತಿಳಿದು ಮದ್ದೂರು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.