ಹಿಂದಿ – ಇಂಗ್ಲಿಷ್ ಮಾತನಾಡೋ ಶಾಸಕರನ್ನ ಲೋಕಸಭೆ ಕಳಸೋಣ : ಮುಂದಿನ ಎಂ ಎಲ್ ಎ ನಾನೇ

ಮಂಡ್ಯ : ಹಿಂದಿ – ಇಂಗ್ಲಿಷ್ ಮಾತನಾಡುವ ನಾಗಮಂಲದ ಶಾಸಕ ಸುರೇಶ್ ಗೌಡ ಅವರನ್ನು ಲೋಕಸಭೆಗೆ ಕಳಸೋಣ, ಮುಂದಿನ ಎಂ ಎಲ್ ಎ ನಾನೇ ಎನ್ನುವ ಮೂಲಕ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಟಿಕೆಟ್ ಗಾಗಿ ಈಗಿನಿಂದ ಪೈಪೋಟಿ ಆರಂಭಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನಾಗಮಂಗಲ ಕ್ಷೇತ್ರಕ್ಕೆ ಟಿಕೆಟ್ ಕೊಡೋದಾಗಿ ದೇವೇಗೌಡರು, ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ. ನಾನು ನಾಗಮಂಗಲದಲ್ಲಿ ಚುನಾವಣೆಗೆ ತಯಾರಿ ಆರಂಭಿಸಿದ್ದೇನೆ. ನಾಗಮಂಗಲ ಟಿಕೆಟ್ ನಂದೇ. ನಾಗಮಂಗಲದ ಮುಂದಿನ ಶಾಸಕ ನಾನೇ. ಈ ಬಾರಿ ನಾಗಮಂಗಲ ಕ್ಷೇತ್ರದಲ್ಲಿ ನನ್ನದೇ ಆಟ ಎಂದು ತಿಳಿಸಿದರು.
ನಾನು ಜೆಡಿಎಸ್ ನಲ್ಲೇ ಇದ್ದೇನೆ. ಜೆಡಿಎಸ್ ನಿಂದಲೇ ಟಿಕೆಟ್ ಪಡೆಯುತ್ತೇನೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ. ಹಾಲಿ ಶಾಸಕ ಸುರೇಶ್ ಗೌಡ ತುಂಬಾ ಚೆನ್ನಾಗಿ ಇಂಗ್ಲಿಷ್ – ಹಿಂದಿ ಕೂಡ ಮಾತನಾಡುತ್ತಾರೆ. ಅವರನ್ನು ಲೋಕಸಭೆಗೆ ಕಳಿಸೋಣ. ಎನ್ನುವ ಮೂಲಕ ಶಾಸಕ ಸುರೇಶ್ ಗೌಡ ಅವರಿಗೆ ಟಾಂಗ್ ನೀಡಿದರು.