ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ಮರವೂರು ಬ್ರಿಡ್ಜ್ ಕುಸಿತದ ಸ್ಥಳಕ್ಕೆ ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕ ಐವನ್ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಮಾರು 50 ವರ್ಷಗಳ ಹಿಂದೆ ಕಟ್ಟಿದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಒದಗಿಸುವ ಏಕೈಕ ಮಂಗಳೂರು ನಗರದ ರಸ್ತೆ ಮರವೂರು ಬ್ರಿಡ್ಜ್ ಕುಸಿದುಬಿದ್ದಿದ್ದು, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಜನರಿಗೆ ತೊಂದರೆಯಾಗಿದೆ. ಪ್ರಸ್ತುತ ಪರ್ಯಾಯ ಬ್ರಿಡ್ಜ್ ಸೇತುವೆ ನಡೆಯುತ್ತಿದ್ದು ಈ ಕಾಮಗಾರಿ ಸಂದರ್ಭದಲ್ಲಿ ಹಳೆಯ ಬ್ರಿಡ್ಜ್ ಕುಸಿತ ಕಂಡಿರುವುದು, ಹೊಸದಾಗಿ ಕಟ್ಟಲ್ಪಡುವ ಬ್ರಿಡ್ಜ್ ಕಾಮಾಗಾರಿ ಮೇಲೆ ಜನರು ಸಂಶಯ ಪಡೆಯುವಂತಾಗಿದೆ ಎಂದು ಐವನ್ ಡಿಸೋಜಾ ಕಿಡಿಕಾರಿದ್ದಾರೆ.
ಮಾತ್ರವಲ್ಲದೆ ನೂತನವಾಗಿ ಕಟ್ಟಲ್ಪಡುವ ಬ್ರಿಡ್ಜ್ ನ ಎರಡು ಪಿಲ್ಲರ್ ನೀರಿನ ಸೆಳೆತಕ್ಕೆ ಕಳಚಿ ಹೋಗಿದೆ. ಸದ್ಯ ಕುಸಿದು ಬಿದ್ದ ಬ್ರಿಡ್ಜನ್ನು ಮತ್ತೆ ಪುನರ್ ನಿರ್ಮಾಣಗೊಳಿಸಿ ಕನಿಷ್ಠ ಲಘು ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಮನವಿ ಮಾಡಿದ್ದಾರೆ.