ಮೀನ ಕೊಟ್ಟ ಡಿಚ್ಚಿಗೆ, ಬೋಟ್ ನಲ್ಲಿದ್ದ ಮೀನುಗಾರರು ಕಂಗಾಲು
ಮಂಗಳೂರು : ನಾವು ಅಂದುಕೊಳ್ಳುವುದು ಒಂದಾದರೆ, ದೈವ ಮತ್ತೊಂದು ಬಗೆಯುವುದು ಎನ್ನುವುದಕ್ಕೆ ಈ ಘಟನೆ ತಾಜಾ ಉದಾರಹಣೆ ಇದ್ದಂತೆ.
ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಆಳಸಮುದ್ರಕ್ಕೆ ತೆರಳಿದ್ದ ಬೋಟ್ ಗೆ, ಸಮುದ್ರದಲ್ಲಿದ್ದ ಮೀನು ಕೊಟ್ಟ ಡಿಚ್ಚಿಯಿಂದ ಮೀನುಗಾರಿಕೆ ಬಿಟ್ಟು ಮೀನುಗಾರರು ವಾಪಾಸ್ಸು ಬಂದ ಘಟನೆ ನಡೆದಿದೆ.
ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ಎಂದಿನಂತೆ ಇಂದು ತಮ್ಮ ಬೋಟ್ ತೆಗೆದುಕೊಂಡ ಸಮುದ್ರಕ್ಕೆ ಇಳಿದರು. ಮೀನಿನ ಭೇಟೆಗಾಗಿ ಆಳಕ್ಕೆ ತೆರಳಿದರು. ಆದರೆ, ಇವರು ಅಂದುಕೊಂತೆ ಆಗಿದ್ದರೆ, ಭರ್ಜರಿ ಮೀನಿನೊಂದಿಗೆ ವಾಪಾಸ್ಸು ಬರುತ್ತಿದ್ದರು. ಆದರೆ, ವಿಧಿ ಆಟದಂತೆ ಮೀನಿಗೆ ಇವರು ಬಲಿ ಬಿಸೂವ ಮೊದಲು, ಇವರ ಬೋಟ್ ಗೆ ಮೀನೊಂದು ಡಿಚ್ಚಿ ಕೊಟ್ಟ ಹೊಡೆತಕ್ಕೆ ಮೀನುಗಾರಿಕೆ ಬಿಟ್ಟು ಬರುವಂತೆ ಮಾಡಿದೆ.
ಮಡಲ್ ಎನ್ನುವ ಮೀನು ಆಳ ಸಮುದ್ರದಲ್ಲಿ ಇರುತ್ತದೆ. ಇದೇ ಮೀನು ಬೋಟ್ ಗೆ ಡಿಚ್ಚಿ ಕೊಟ್ಟಿದೆ. ಮೀನು ಕೊಟ್ಟ ಡಿಚ್ಚಿಗೆ ಬೋಟ್ ಹಾನಿಯಾಗಿದೆ. ಮಡಲ್ ಎನ್ನುವ ಮೀನಿಗೆ ದೊಡ್ಡ ಗಾತ್ರದ, ಚೂಪು ಬಾಯಿ ಹೊಂದಿದ್ದು, ಇದನ್ನು ಬಳಸಿಕೊಂಡು ಬೋಟ್ ಗೆ ಹಾನಿ ಮಾಡಿದೆ. ಇದರಿಂದ ಬೋಟ್ ಹಾನಿಗೊಂಡಿದೆ ಎನ್ನಲಾಗುತ್ತಿದೆ.