ಮಂಗಳೂರಲ್ಲಿ ನಿನ್ನೆ ಸಂಜೆಯಿಂದ ವಾರಾಂತ್ಯ ಕರ್ಫ್ಯೂ ಜಾರಿಯಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಣ್ಣು, ತರಕಾರಿ ಮಾರ್ಕೆಟ್ ಬಂದ್ ಆಗಿದ್ದು ಮಾಂಸ ದಿನಸಿ ಅಂಗಡಿಯೂ ಕ್ಲೋಸ್ ಆಗಿದೆ.
ಹಾಲು, ಪೇಪರ್, ಮೆಡಿಕಲ್ ಹೊರತುಪಡಿಸಿ ಇತರ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಮಂಗಳೂರಿನ ಕದ್ರಿ, ನಂತೂರು, ಕೂಳೂರು ಸೇರಿ ಹಲವೆಡೆ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ನಗರದ 40ಕ್ಕೂ ಅಧಿಕ ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಮೆಡಿಕಲ್ ಮತ್ತು ತುರ್ತು ಸೇವೆ ಹೊರತುಪಡಿಸಿ ಸಂಚರಿಸೋ ವಾಹನಗಳನ್ನು ಸೀಝ್ ಮಾಡಲಾಗುತ್ತಿದೆ.
ಕಟ್ಟಡ ಕಾಮಗಾರಿ ಕಾರ್ಮಿಕರ ಸಂಚಾರ ನಿಷೇಧವಿದ್ದರೂ ಕೆಲವರ ಓಡಾಟ ನಡೆಸುತ್ತಿದ್ದರು. ಕಾರ್ಮಿಕರನ್ನ ನಿಲ್ಲಿಸಿ ಕರ್ಪ್ಯೂ ಆದೇಶದ ಪ್ರತಿ ತೋರಿಸಿ ಪೊಲೀಸರು ವಾರ್ನ್ ಮಾಡುತ್ತಿರುವ ದೃಶ್ಯ ಕಂಡು ಬಂತು. ಹೊಟೇಲ್ ಗಳಲ್ಲಿ ಆನ್ ಲೈನ್ ಫುಡ್ ಡೆಲಿವರಿಗಷ್ಟೇ ಅವಕಾಶ ನೀಡಲಾಗಿದೆ.