ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಸೋಲುವಂತೆ ಕೋಚ್ ಸೌಮ್ಯದೀಪ್ ರಾಯ್ ಸೂಚಿಸಿದ್ದರು ಎಂದು ಭಾರತದ ಟೇಬಲ್ ಟೆನಿಸ್ ತಾರೆ ಮಣಿಕ್ ಬಾತ್ರಾ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲೂ ಮ್ಯಾಚ್ ಫಿಕ್ಸಿಂಗ್ ಭೂತ ಕಾಣಿಸಿಕೊಂಡಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕೋಚ್ ಸೌಮ್ಯದೀಪ್ ರಾಯ್ ಅವರ ಸಹಾಯ ಪಡೆಯದೇ ಸ್ಪರ್ಧಿಸಿದ್ದಕ್ಕಾಗಿ ಕಾರಣ ನೀಡುವಂತೆ ಟೇಬಲ್ ಟೆನಿಸ್ ಸಂಸ್ಥೆ ನೀಡಿದ ಉತ್ತರದಲ್ಲಿ ಈ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ತಂಡದ ಪ್ರಧಾನ ಕೋಚ್ ಸೌಮ್ಯದೀಪ್ ರಾಯ್ ಅವರ ಸಹಾಯ ಪಡೆಯಲು ನಿರಾಕರಿಸಿದ್ದು ಏಕೆಂದರೆ ಅವರು ಅರ್ಹತಾ ಸುತ್ತಿನಲ್ಲಿ ಸೋಲುವಂತೆ ಸೂಚಿಸಿದ್ದರು ಎಂದಿದ್ದಾರೆ.
ಯಾರಾದರೂ ನನ್ನ ಬದ್ಧತೆ ಹಾಗೂ ಆಟದ ಶೈಲಿ ಬಗ್ಗೆ ಪ್ರಶ್ನಿಸಿದರೆ ಅಥವಾ ಉದ್ದೇಶಪೂರ್ವಕವಾಗಿ ಹೀಗೆ ಮಾಡು ಎಂದು ಸೂಚಿಸಿದರೆ ಆಟದ ಮೇಲಿನ ಗಮನ ಕಳೆದುಕೊಳ್ಳುತ್ತೇನೆ ಎಂದು ಮಣಿಕಾ ಬಾತ್ರಾ ಆರೋಪಿಸಿದ್ದಾರೆ.