ನಿರೀಕ್ಷೆಗೂ ಮೀರಿ ಹೋರಾಟ ನಡೆಸಿದ ಮಣಿಕಾ ಬಾತ್ರಾ ಟೋಕಿಯೊ ಒಲಿಂಪಿಕ್ಸ್ ಟೇಬಲ್ ಟೆನಿಸ್ ನ ಮೂರನೇ ಸಿಂಗಲ್ಸ್ ನಲ್ಲಿ ಹೊರಬಿದ್ದಿದ್ದಾರೆ. ಈ ಮೂಲಕ ಮಣಿಕಾ ಅವರ ಅಭಿಯಾನ ಅಂತ್ಯಗೊಂಡಿತು.
ಸೋಮವಾರ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೂರನೆ ಸುತ್ತಿನಲ್ಲಿ ಮಣಿಕಾ ಬಾತ್ರಾ 3-0 ಸೆಟ್ ಗಳಿಂದ 17ನೇ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಸೋಫಿಯಾ ಪಾಲ್ಕೊನೊವಾ ವಿರುದ್ಧ ಹೀನಾಯ ಸೋಲುಂಡರು.
ಮೊದಲೆರಡು ಸುತ್ತುಗಳಲ್ಲಿ ತಮಗಿಂತ ಮೇಲಿನ ಶ್ರೇಯಾಂಕಿತ ಆಟಗಾರ್ತಿಯರ ವಿರುದ್ಧ ರೋಚಕ ಗೆಲುವು ಕಂಡಿದ್ದ ಮಣಿಕಾ ಸೋಮವಾರ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಸೋಫಿಯಾ ಅದ್ಭುತ ಆಟದ ಮುಂದೆ ಮಣಿಕಾ ಮಂಕಾದರು.
ಇದಕ್ಕೂ ಮುನ್ನ ಭಾರತದ ಮತ್ತೊಬ್ಬ ಸ್ಪರ್ಧಿ ಸುತೀರ್ಥ ಮುಖರ್ಜಿ ಸೋಲುಂಡಿದ್ದರಿಂದ ಟೋಕಿಯೊ ಒಲಿಂಪಿಕ್ಸ್ ನ ಟೇಬಲ್ ಟೆನಿಸ್ ವಿಭಾಗದ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.