ವಿಶ್ವದಾಖಲೆಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಎಂಸಿ ಮೇರಿಕೋಮ್ ಮತ್ತು ಭಾರತ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಟೊಕಿಯೊ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿಯುವ ಗೌರವ ಪಡೆದಿದ್ದಾರೆ.
ಭಾರತೀಯ ಒಲಿಂಪಿಕ್ಸ್ ಸಮಿತಿ ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಆಗಸ್ಟ್ 8ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪದಕದ ಭರವಸೆ ಮೂಡಿಸಿರುವ ಕುಸ್ತಿಪಟು ಭಜರಂಗ್ ಪೂನಿಯಾ ತ್ರಿವರ್ಣ ಧ್ವಜವನ್ನು ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ.
ಟೊಕಿಯೊ ಒಲಿಂಪಿಕ್ಸ್ ನಲ್ಲಿ ಲಿಂಗ ಸಮಾನತೆ ಸಾರುವ ಉದ್ದೇಶದಿಂದ ಈ ಬಾರಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಅಥ್ಲೀಟ್ ಗೆ ಧ್ವಜ ಹಿಡಿಯುವ ಗೌರವ ನೀಡಲಾಗಿದೆ. 2016ರ ಒಲಿಂಪಿಕ್ಸ್ ನಲ್ಲಿ ಅಭಿನವ್ ಭಿಂದ್ರಾ ಮಾತ್ರ ಧ್ವಜ ಹಿಡಿದಿದ್ದರು.
ಭಾರತ ಈ ಬಾರಿ ಒಲಿಂಪಿಕ್ಸ್ ಗೆ ದೊಡ್ಡ ತಂಡವನ್ನು ಕಳುಹಿಸಲಿದ್ದು, ಕನಿಷ್ಠ 100 ಅಥ್ಲೀಟ್ ಗಳು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.