ಭಾರತೀಯ ಶೂಟರ್ ಗಳ ನಿರಾಶಾದಾಯಕ ಪ್ರದರ್ಶನ ಮುಂದುವರಿದಿರುವ ನಡುವೆ ಭಾರತದ ವನಿತೆಯರು ವೈಯಕ್ತಿಕ ವಿಭಾಗದಲ್ಲಿ ಗೆಲುವು ಕಾಣುವ ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸಮಾಧಾನ ತಂದಿದ್ದಾರೆ.
ಭಾನುವಾರ ನಡೆದ ವನಿತೆಯರ 51 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ವಿಶ್ವದಾಖಲೆ ಬರೆದಿರುವ 38 ವರ್ಷದ ಮೇರಿಕೋಮ್ ಮೊದಲ ಸುತ್ತಿನಲ್ಲಿ ಡೊಮಿನಿಕಾ ರಿಪಬ್ಲಿಕ್ ನ ಗ್ಯಾರ್ಸಿಯಾ ಮಿಗ್ನುಯೆಲಾ ಅವರನ್ನು 4-1ರಿಂದ ಮಣಿಸಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಇದೀಗ 3ನೇ ಶ್ರೇಯಾಂಕಿತೆ ಕೊಲಂಬಿಯಾದ ವಲೆನಿಕಾ ವಿಕ್ಟೋರಿಯಾ ಅವರನ್ನು ಎದುರಿಸಲಿದ್ದಾರೆ.
ವನಿತೆಯರ ಸಿಂಗಲ್ಸ್ ಟೇಬಲ್ ಟೆನಿಸ್ ನಲ್ಲಿ ಮಣಿಕಾ ಬಾತ್ರಾ 2 ಸೆಟ್ ಗಳ ಹಿನ್ನಡೆ ಅನುಭವಿಸಿದ್ದರೂ ತಿರುಗೇಟು ನೀಡುವ ಮೂಲಕ ತನಗಿಂತ 30 ಶ್ರೇಯಾಂಕ ಮೇಲಿರುವ ಉಕ್ರೇನ್ ನ ಮರ್ಗಾತ್ಯ ಪೆಸ್ಟೋವೋಕಾ ಅವರನ್ನು ಸೋಲಿಸಿ 4-3 ಸೆಟ್ ಗಳಿಂದ 2ನೇ ಸುತ್ತು ಪ್ರವೇಶಿಸಿದರು.