ರೆಡಿಯಾಲಜಿಸ್ಟ್ ದಂಪತಿಗಳಿಗೆ ದುಷ್ಕರ್ಮಿಗಳಿಂದ ಚಾಕು ಇರಿತ!
ಮೈಸೂರು: ಕೆಲಸ ನೀಡದಿದ್ದಕ್ಕೆ ವ್ಯಕ್ತಿಯೊವ್ರ ನಗರದ ಸರಸ್ವತಿಪುರಂನ, ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಎಎಕ್ಸ್ ಎಲ್ ಪ್ರೈಮ್ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೆಡಿಯಾಲಜಿಸ್ಟ್ ಮತ್ತವರ ಪತ್ನಿಗೆ ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಪಟ್ಟಣದ ವಿಜಯನಗರದಲ್ಲಿ ನಡೆದಿದೆ.
ರೆಡಿಯಾಲಜಿಸ್ಟ್ ಕೇಶವ್ ಪಿ.ರಾಯಚೂರ್ಕರ್ ಮತ್ತವರ ಪತ್ನಿ ಡಾ.ಕೃಷ್ಣಕುಮಾರಿ ಎಂಬುವವರೇ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಳಗಾದ ಇವರು ಸರಸ್ವತಿಪುರಂ ಪೊಲೀಸ್ ಠಾಣೆಯ ಪಕ್ಕದಲ್ಲಿ ಎಎಕ್ಸ್ ಎಲ್ ಪ್ರೈಮ್ ಎಂಬ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಜೆ 8.30ರ ಸುಮಾರಿಗೆ ಕಾರ್ ಶೆಡ್ ಬಳಿ ವಾಹನಬಂದಂತೆ ಶಬ್ದವಾಗಿದಿದೆ. ನನ್ನ ಪತಿ ಬಂದಿರಬಹುದೆಂದು ಬಾಗಿಲು ತೆರೆದು ನೋಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಿ, ಹೆಲ್ಮೆಟ್ ಹಾಕಿಕೊಂಡು ಏಕಾಏಕಿ ಮನೆಯೊಳಗೆ ನುಗ್ಗಿ ಇಬ್ಬರು ದಂಪತಿಗಳಿಗೆ ಹೊಡೆದು ಕೆಳಗೆ ಬೀಳಿಸಿ, ಕತ್ತು ಹಿಡಿದುಕೊಂಡು ಕೈಯಿಂದ ಮುಖಕ್ಕೆ ಹೊಡೆದು ಅಡುಗೆ ಮನೆಗೆ ತಳ್ಳಿ ಬಾಗಿಲು ಹಾಕಿದ್ದಾರೆ.
ಐದರಿಂದ 10ನಿಮಿಷಗಳ ನಂತರ ಬಾಗಿಲು ತೆರೆದು ನೋಡಿದಾಗ ಡೈನಿಂಗ್ ಹಾಲ್ ಬಳಿ ಕೇಶವ್ ಪಿ.ರಾಯಚೂರ್ಕ ಕುತ್ತಿಗೆ, ಮುಖ, ಕೈಗೆಲ್ಲಾ ಚಾಕುವಿನಿಂದ ಚುಚ್ಚಿ ಬಿರುವದನ್ನ ಕಂಡ ಪತ್ನಿ, ಡಾ ಕೃಷ್ಣಕುಮಾರಿ ದುಷ್ಕರ್ಮಿಗಳಿಗೆ ನಿಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋಗಿ ನಮಗೇನು ಮಾಡಬೇಡ ಎಂದು ಹೇಳಿದ್ದಾರೆ. ನಂತರ ಅ ದುಷ್ಕರ್ಮಿಗಳಿಂದ ಬಾತ್ ರೂಂಗೆ ತೇರಳಿ ಕೈಕಾಲು ತೊಳೆದುಕೊಂಡು ಬಂದು ನಾನು ನಿತಿನ್ ಅಂತಾ ಹೇಳಿದ್ದಾನೆ.
ಆಗಾ ಗಾಬರಿಗೊಂಡ ದಂಪತಿಗಳಿಬ್ಬರು ಇತನನ್ನು ನೋಡಿ ಆಶ್ಚಯಗೊಂಡಿದ್ದಾರೆ. ನಾನು ಕೆಲಸ ಕೇಳಿಕೊಂಡು ಬಂದರೆ ನನಗೆ ಕೆಲಸ ಕೊಡದೆ ಕಳುಹಿಸಿದ್ದೀರಿ, ಅದಕ್ಕೆ ಈ ರೀತಿ ಮಾಡಿದ್ದನೆಂದು ಹೇಳಿದ್ದಾನೆ. ನಂತರ ಡಾ.ಕೃಷ್ಣಕುಮಾರಿ ಕುತ್ತಿಗೆಯಲ್ಲಿದ್ದ 64ಗ್ರಾಂ ಚಿನ್ನದ ಸರ ಮತ್ತು 60ಗ್ರಾಂ ತೂಕದ ನಾಲ್ಕು ಚಿನ್ನದ ಬಳೆಗಳೆ ಹಾಗೂ ಐಫೋನ್ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆ ನಡೆಸಿದ ಈ ಅಸಾಮಿ ಮತ್ತು ಈತನಿಗೆ ಸಹಾಯ ಮಾಡಿದ ಸಹಚರನ ಮೇಲೆ ಕ್ರಮ ಕೈಗೊಳ್ಳುವಂತೆ, ದಂಪತಿಗಳಿಬ್ಬರು ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸಧ್ಯ ಪೊಲೀಸರು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
