ತುಮಕೂರು : ರಾಜ್ಯ ಸರ್ಕಾರವು ಲಾಕ್‌ಡೌನ್‌ನಿಂದ ಅನುಕೂಲವಾಗಲೆಂದು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಹಲವು ಯೋಜನೆಗಳನ್ನ ಜಾರಿಗೊಳಿಸಿದೆ. ಆದರೆ, ಇದ್ದನ್ನೆ ಬಡವಾಳ ಮಾಡಿಕೊಂಡ ಮಧ್ಯವರ್ತಿಗಳು ಕಾರ್ಮಿಕ ಇಲಾಖೆ ಅಧಿಕಾರಿಗಳು ಎಂದು ನಕಲಿ ಕಾರ್ಡ್‌ಗಳನ್ನ ತೋರಿಸಿ ಕೂಲಿ ಕಾರ್ಮಿಕರಿಂದ ವಸೂಲಿಗೆ ಇಳಿದಿದ್ದಾರೆ.
ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಲು 1050 ರೂಪಾಯಿ, ಕಟ್ಟಡ ಕಾರ್ಮಿಕರಿಗೆ ನೀಡುವ ಲಾಕ್‌ಡೌನ್‌ನ 3 ಸಾವಿರ ಹಣವನ್ನು ಖಾತೆಗೆ ಹಾಕಿಸಲು 300 ರೂಪಾಯನ್ನು ವಸೂಲಿ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಗುರುಗದಹಳ್ಳಿ ಗ್ರಾಮದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕಾರ್ಮಿಕ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ನಕಲಿ ಕಾರ್ಡ್ ತೋರಿಸಿ ಕೂಲಿ ಕಾರ್ಮಿಕರಿಂದ ಹಣ ಪಡೆಯುತ್ತಿದ್ದ ಸುನೀಲ್ ಎನ್ನುವ ವ್ಯಕ್ತಿಯನ್ನ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು ಚೀಮಾರಿ ಹಾಕಿದ್ದಾರೆ.
ಮಧ್ಯವರ್ತಿಗಳಿಗೆ ತಿಪಟೂರು ಕಾರ್ಮಿಕ ಇಲಾಖೆಯ ಅಧಿಕಾರಿಗಳೇ ಕೈಜೋಡಿಸಿದ್ದು ಸರ್ಕಾರ ಕೂಡಲೇ ಮದ್ಯವರ್ತಿಗಳು ಹಾಗೂ ನಕಲಿ ಅಧಿಕಾರಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.