ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಟೀಕೆ ಮುಂದುವರಿದಿದೆ. ಪೊಲೀಸರೇ ಸರ್ಕಾರದ ಅಕ್ರಮವನ್ನು ಬಯಲಿಗೆಳೆದಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಇದೀಗ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ವಿರುದ್ಧ ಟೀಕೆ ಮಾಡಿದ್ದಾರೆ.
ಪರೀಕ್ಷೆಗಳ ವಿಚಾರದಲ್ಲಿ ಡಾ ಅಶ್ವಥ್ ನಾರಾಯಣ ಬಹಳ ಅನುಭವಸ್ಥರು, ಹಿಂದೆ ನರ್ಸ್ ಗಳಿಗೆ ಸರ್ಟಿಫಿಕೇಟ್ ಕೊಡಿಸುವ ವಿಚಾರದಲ್ಲಿ ಅವರ ಹೆಸರು ಕೇಳಿಬಂದಿತ್ತು. ಡಾ ಅಶ್ವಥ್ ನಾರಾಯಣ್ ಸಾಕಷ್ಟು ಜನರಿಗೆ ರಾಜಕೀಯಕ್ಕೆ ಬರುವ ಮೊದಲೇ ಸರ್ಟಿಫಿಕೇಟ್ ಕೊಡಿಸಿದ್ದಾರೆ. ಕಾಂಗ್ರೆಸ್ ನವರು ಈ ವಿಚಾರದ ಬಗ್ಗೆಯೂ ಪ್ರಸ್ತಾಪ ಮಾಡಬೇಕಿತ್ತು ಎಂದಿದ್ದಾರೆ.
ಜನರು ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕು. 2008ರಲ್ಲಿ ಅಂದಿನ ಸರ್ಕಾರ ವಿರುದ್ಧ ಹೋರಾಟ ಮಾಡಿದ್ದೆವು. ಆಗ ಟನ್ ಗಟ್ಟಲೆ ಮಾಹಿತಿ ನನ್ನ ಬಳಿ ಇದ್ದವು. ಸರ್ಕಾರ ಎಲ್ಲ ವಿಚಾರದಲ್ಲಿ ಮೌನವಹಿಸಿದೆ. ಮೌನವಹಿಸಿರುವುದರ ಅರ್ಥ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನು ಓದಿ :- ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ