ಮಧ್ಯಪ್ರದೇಶದ ದಂಪತಿಗಳು ಎರಡು ಮರಗಳಲ್ಲಿ ಬೆಳೆದ ಮಾವಿನ ಹಣ್ಣಿನ ರಕ್ಷಣೆಗೆ ಭದ್ರತಾ ಸಿಬ್ಬಂದಿ, ಶ್ವಾನಗಳನ್ನು ನಿಯೋಜಿಸಬೇಕಾಗಿದೆ. ಇದಕ್ಕೆ ಕಾರಣ ಈ ಅಪರೂಪದ ಮಾವಿನ ಹಣ್ಣಿನ ಬೆಲೆ ಕೆಜಿಗೆ 2.70 ಲಕ್ಷ ರೂಪಾಯಿ!
ನಂಬಲು ಅಸಾಧ್ಯವಾದರೂ ಇದು ನಿಜ. ಜಪಾನಿನ ಮಿಯಾಜಾಕಿ ತಳಿಯ ಈ ಮಾವಿನ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಕೆಜಿಗೆ 2.70 ಲಕ್ಷ ರೂ. ಇದೆ. ಸಾಮಾನ್ಯವಾಗಿ ಮಾವಿನ ಹಣ್ಣಿನ ಬೆಲೆ 50ರಿಂದ 100 ರೂ. ಆದರೆ ಜನರು ಬಾಯಿಬಿಡುವ ಕಾಲದಲ್ಲಿ 2.70 ಲಕ್ಷ ರೂ. ಅಂದರೆ ಜನರ ಪರಿಸ್ಥಿತಿ ಹೇಗಿರಬೇಕು ನೀವೇ ಊಹಿಸಿ.
ಜಪಾನಿನ ಮಿಯಾಜಾಕಿ ಮಾವಿನ ಹಣ್ಣು ಇದೀಗ ವಿಶ್ವದ ಅತ್ಯಂತ ದುಬಾರಿ ಹಣ್ಣು ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಹಣ್ಣನ್ನು ಕೆಲವೇ ರಾಷ್ಟ್ರಗಳು ಬೆಳೆಯುತ್ತಿವೆ. ಬಾಂಗ್ಲಾದೇಶ, ಇಂಡೋನೇಷ್ಯಾ ಮತ್ತು ಫಿಲಿಪ್ಪೆನ್ಸ್ ನಂತರ ಇದೀಗ ಭಾರತದಲ್ಲಿ ಬೆಳೆಯಲಾಗುತ್ತಿದೆ.
ಈ ಹಣ್ಣನ್ನು ಸಮಶೀತೋಷ್ಣ ವಲಯ ಹಾಗೂ ಸುದೀರ್ಘ ಕಾಲದ ಸೂರ್ಯನ ಬಿಸಿಲು ಇರುವ ಪ್ರದೇಶದಲಷ್ಟೇ ಬೆಳೆಯಬೇಕಾಗಿದೆ. ಕೆಂಪು ಬಣ್ಣದಲ್ಲಿ ಹೊಳೆಯುವ ಮಾವಿನ ಹಣ್ಣನ್ನು ಎಗ್ಸ್ ಆಫ್ ರೆಡ್ ಎಂದು ಕರೆಯಲಾಗುತ್ತದೆ. ಈ ಹಣ್ಣಿನ ತೂಕ ಸುಮಾರು 350 ಗ್ರಾಂ ಇರುತ್ತದೆ. ಕೆಲವೊಂದು 900 ಗ್ರಾಂ ತೂಕವೂ ಇರುತ್ತದೆ. ಸಾಮಾನ್ಯ ಹಣ್ಣುಗಳಿಗಿಂತ ಶೇ.15ರಷ್ಟು ಸಕ್ಕರೆ ಅಂಶ ಇರುತ್ತದೆ.