ರಾಮನಗರ : ಕೊರೊನಾ ತಡೆಯಲು ಸರಕಾರ ಒಂದಷ್ಟು ನಿಮಯಗಳನ್ನ ಜಾರಿ ಮಾಡಿದೆ. ಆದರೆ, ಸ್ವತಃ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿ ಫುಡ್ ಕಿಟ್ ವಿತರಣೆ ಮಾಡಿರುವ ಘಟನೆ ನಡೆದಿದೆ.
ರಾಮನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಧನ ಸಹಾಯ ಹಾಗೂ ಫುಡ್ ಕಿಟ್ ವಿತರಣೆ ಮಾಡುವ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಒಂದೇ ಸೇರಿದ್ದರು.
ಇಲ್ಲಿ ಯಾವುದೇ ಸಾಮಾಜಿಕ ಅಂತರ ಇರಲಿಲ್ಲ ಸ್ವತಃ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಗುಂಪು ಗುಂಪಾಗಿ ಸೇರಿಸಿಕೊಂಡಿ ಫುಡ್ ಹಾಗೂ ಧನ ಸಹಾಯದ ಕವರ್ ಗಳನ್ನ ವಿತರಣೆ ಮಾಡಿದರು. ಇವರಿಗೆ ಕೊರೋನಾ ಇದೆ ಎಂಬ ಅರಿವೆ ಇಲ್ಲದಂತಾಗಿತ್ತು. ಇದನ್ನ ತಡೆಯಬೇಕಿದ್ದ ಪೊಲೀಸರು ಮಾತ್ರ ನಮಗು ಇದಕ್ಕು ಸಂಬಂಧ ಇಲ್ಲಾ ಅಂತಾ ನಿಂತ್ತಿದ್ರು.