ಬೆಂಗಳೂರು : ರಾಜ್ಯ ಸರ್ಕಾರ ಉಚಿತವಾಗಿ ಲಸಿಕೆ ಕೊಡುತ್ತದೆ ಎಂದು ಬಡವರ ಕಾಯುತ್ತಿದ್ದಾರೆ. ಆದರೆ, ಹಣ ಉಳ್ಳವರಿಗೆ ಮಾತ್ರ ಲಸಿಕೆ ಸಿಗುತ್ತಿದೆ ಎಂದು ಸರ್ಕಾರದ ವಿರುದ್ಧ ಶಾಸಕ ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಕ್ಸಿನ್ ತೆಗೆದುಕೊಂಡು ನಮ್ಮ ಪ್ರಾಣ ಉಳಿಸಿಕೊಳ್ಳುವುದು ನಮ್ಮ ಹಕ್ಕು. ದುಡ್ಡು ಇದ್ದವರಿಗೆ ಮಾತ್ರ ವ್ಯಾಕ್ಸಿನ್ ಸಿಗುತ್ತಿದೆ. ಒಂದು ಡೋಸ್ ಗೆ 1200 ರೂಪಾಯಿ ಒಂದು ಫ್ಯಾಮಿಲಿಗೆ ಕನಿಷ್ಠ 9600 ರೂಪಾಯಿ ದುಡ್ಡು ಬೇಕು ಎಂದರು.
ಸೊಪ್ಪು ಮಾರುವವರು ಕುಂಬಾರರು ಕ್ಷೌರ ಮಾಡುವವರು ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದಾರೆ. ಇಂತ ಸಂದರ್ಭದಲ್ಲಿ ದುಡ್ಡು ಕೊಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳ ಹಾಕಿಸಿಕೊಳ್ಳಲಾಗತ್ತಾ? ಎಂದು ಸರ್ಕಾರವನ್ನು ಪಶ್ನಿಸಿದರು.
ಅಲ್ಲದೆ ದುಡ್ಡಿದ್ದವರು ದೊಡ್ಡಪ್ಪ, ದುಡ್ಡಿಲ್ಲದವರ ಆತ್ಮಾಹುತಿ ಆಗಬೇಕಾ? ಭ್ರಷ್ಟಾಚಾರದಲ್ಲಿ ಮುಳುಗಿಹೋದ ಸರ್ಕಾರ ದಿಂದ ಬಡವರು ಸಾಯುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಬೇಕಾಗಿದೆ ಎಂದು ಸರ್ಕಾರರ ವಿರುದ್ದ ಹರಿಹಾಯ್ದರು.