ಬೆಂಗಳೂರು: ಯುವಕನೊಬ್ಬನಿಗೆ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಿಂದ ಬಂದಿದ್ದ ಅಂಧ ಯುವಕನೊಬ್ಬ ಬೆಳಗ್ಗೆಯಿಂದಲೂ ವಿಧಾನಸೌಧದ ಕೆಂಗಲ್ ಹನುಮಂತಯ್ಯ ದ್ವಾರದ ಬಳಿ ನಿಂತಿದ್ದ. ಅಧಿವೇಶನ ಮುಗಿಯುವವರೆಗೂ ಅಲ್ಲಿಯೇ ಇದ್ದ ಯುವಕನನ್ನು ನೋಡಿದ ಶಾಸಕ ರೇಣುಕಾಚಾರ್ಯ ಆತನನ್ನು ನೋಡಿ ಅವನ ಬಗ್ಗೆ ಹಾಗೂ ಆತನ ಹಿನ್ನೆಲೆ ಬಗ್ಗೆ ತಿಳಿದುಕೊಂಡರು.
ನಂತರ ಆತನಿಗೆ ಯಾವ ರೀತಿ ಸಹಾಯ ಬೇಕು ಎಂದು ತಿಳಿದು 5 ಸಾವಿರ ರೂಪಾಯಿ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ವಿಧಾನಸೌಧದ ಬಳಿ ಇದ್ದ ಪೊಲೀಸರಿಗೆ ಈತನನ್ನು ಖಾನಾಪುರ ಬಸ್ ಹತ್ತಿಸಿ ಊರಿಗೆ ಕಳಿಸುವಂತೆ ತಿಳಿಸಿದರು. ಹಣವಿದ್ದರೂ ಕೊಡುವ ಮನಸ್ಸಿರಬೇಕು ಎಂಬತೆ ಶಾಸಕ ಎಂ ಪಿ ರೇಣುಕಾಚಾರ್ಯ ಆ ಯುವಕನಿಗೆ ತನ್ನ ಊರಿಗೆ ತೆರಳಲು ಸಹಾಯ ಮಾಡಿದ್ದಾರೆ.