ರಾಜ್ಯಸಭೆ ಚುನಾವಣೆಯಲ್ಲಿ 3 ಸ್ಥಾನ ಗೆದ್ದಿದ್ದೇವೆ. ಪ್ರಥಮ ಬಾರಿ ಬಿಜೆಪಿ 3 ಸ್ಥಾನ ಪಡೆದಿದ್ದು ಚುನಾವಣೆಯಲ್ಲಿ ನಮ್ಮ ಪ್ರಾತಿನಿಧಿತ್ವ ಹೆಚ್ಚಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ರು. ಬೆಳಗಾವಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ನಲ್ಲೂ 4 ಸ್ಥಾನ ಗೆಲ್ಲುವ ವಿಶ್ವಾಸವಿದೆ. ವಾಯುವ್ಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಯಡಿಯೂರಪ್ಪ ಸೇರಿ ನಮ್ಮ ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ. ಎಲ್ಲಾ ಸಂಘ ಸಂಸ್ಥೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅರುಣ್ ಶಹಾಪುರ್, ಹನುಮಂತ ನಿರಾಣಿ ದೊಡ್ಡ ಲೀಡ್ ನಲ್ಲಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ರು.
ಪ್ರಭಾಕರ್ ಕೋರೆ ಅಸಮಾಧಾನ ವಿಚಾರ
ಪ್ರಭಾಕರ್ ಕೋರೆ ನಮ್ಮ ಹಿರಿಯರು ಮಾರ್ಗದರ್ಶಕರು ಅವರು ನಮ್ಮ ಜೊತೆಯಲ್ಲಿದ್ದಾರೆ. ಸದಾ ಕಾಲ ನಮ್ಮ ಮಾರ್ಗದರ್ಶಕರಾಗಿ ಇರುತ್ತಾರೆ. ಪಕ್ಷವು ಗುರುತಿಸುತ್ತದೆ, ನಾವು ಗುರುತಿಸುತ್ತೇವೆ. ಸುದೀರ್ಘವಾಗಿ 4 ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಮಾಡಿದ ಕೆಲಸ ನಮಗೆ ಮಾರ್ಗದರ್ಶನ. ಹೀಗಾಗಿ ಅದಕ್ಕೆ ಮಹತ್ವ ಇದೆ, ನಿಮ್ಮ ತಲೆಯಿಂದ ಅದನ್ನೆಲ್ಲ ತಗೆಯಿರಿ. ಗ್ರೌಂಡ್ ರಿಯಾಲಿಟಿ ನೋಡಿದಾಗ ಖಂಡಿತವಾಗಿ ಬಿಜೆಪಿಗೆ ಉತ್ತಮ ಅವಕಾಶ ಇದೆ. ಬೆಳಗಾವಿಯಲ್ಲಿ ಸಂಪೂರ್ಣ ಒಗ್ಗಟ್ಟಿದೆ, ನೂರಕ್ಕೆ ನೂರು ಒಗ್ಗಟ್ಟಿದೆ. ಎಲ್ಲಾ ಸಾಹುಕಾರ್ ಗಳು ಎಲೆಕ್ಷನ್ ಮಾಡ್ತಿದಾರೆ, ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಸಭೆ ಮಾಡಿದ್ದಾರೆ ಎಂದು ತಿಳಿಸಿದ್ರು. ಇದನ್ನೂ ಓದಿ :- ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ – ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಗೆಲುವು ನಿಶ್ಚಯ – ಬಾಲಚಂದ್ರ ಜಾರಕಿಹೊಳಿ
ಬಿಜೆಪಿ ಬಿ ಟೀಂ ಯಾರು ?
ನನ್ನ ವಿರುದ್ಧವೇ ಸಿದ್ದರಾಮಯ್ಯ ಜಾಸ್ತಿ ಮಾತನಾಡೋದು, ನೀವು ನೋಡ್ತಿರಲ್ಲ. ಬೆಳಗಾವಿ ಬಂದಾಗ ಅವರು ಬಳಸುವ ಭಾಷೆ ನೋಡಿದಾಗ ಸಾಫ್ಟ್ ಅಥವಾ ಹಾರ್ಡ್ ನೀವೆ ತಿಳಿದುಕೊಳ್ಳಿ. ಸಿದ್ದರಾಮಯ್ಯ ಆಗಲಿ ಕುಮಾರಸ್ವಾಮಿ ಆಗಲಿ ವ್ಯಾಖ್ಯಾನ ಬಗ್ಗೆ ನಾನು ಹೋಗಬಾರದು ಅಂತಾ ತೀರ್ಮಾನ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಬಿ ಟೀಂ ಅಂತಾರೆ, ಜೆಡಿಎಸ್, ಕಾಂಗ್ರೆಸ್ ಪಕ್ಷ ಬಿ ಟೀಂ ಅಂತಾರೆ. ಈ ಎರಡರ ಅರ್ಥ ಏನಂದ್ರೆ ಎ ಟೀಮ್ ಅಂತೂ ನಾವಾಗಿದ್ದೇವೆ. ಬಿಜೆಪಿ ಎ ಟೀಮ್ ಅಂತಾ ಎಲ್ಲರೂ ಒಪ್ಪಿಕೊಂಡಾಗಿದೆ. ಇನ್ನೂ ಬಿ ಟೀಮ್ ಯಾರಾದರೆ ನಮಗೇನೂ? ತಲೆಕೆಡಿಸಿಕೊಳ್ಳಲ್ಲ. ಯಾವ ಪಕ್ಷವನ್ನೂ ಇನ್ನೊಂದು ಪಕ್ಷ ಮುಗಿಸಲು ಸಾಧ್ಯವಿಲ್ಲ. ಎಲ್ಲವೂ ಜನರ ಕೈಯಲ್ಲಿದೆ ಎಂದು ಹೇಳಿದ್ರು.
ಇದನ್ನೂ ಓದಿ :- ಒಂದು ವಾರದ ವರೆಗೂ ನಾನು ಯಾರನ್ನು ಭೇಟಿ ಮಾಡುವುದಿಲ್ಲ – ಕುಮಾರಸ್ವಾಮಿ