ಆಲ್ ರೌಂಡರ್ ಮೊಯಿನ್ ಅಲಿ ಖಾನ್ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಳೆಯಿಂದ ಡ್ರಾದಲ್ಲಿ ಆಂತ್ಯಗೊಂಡರೂ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದ್ದೂ ಅಲ್ಲದೇ ಗೆಲುವಿನತ್ತ ಮುಖ ಮಾಡಿತ್ತು. ನಾಯಕ ಜೋ ರೂಟ್ ಶತಕ ಬಾರಿಸಿದರೂ ಉಳಿದ ಬ್ಯಾಟ್ಸ್ ಮನ್ ಗಳು ನೀರಸ ಪ್ರದರ್ಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಬಲವರ್ಧನೆ ಹಾಗೂ ಸ್ಪಿನ್ನರ್ ಆಗಿ ಬೌಲಿಂಗ್ ಗೆ ಶಕ್ತಿ ತುಂಬಲು ಮೊಯಿನ್ ಅಲಿಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅವಕಾಶ ನೀಡಿದೆ.