ಮನೆಯ ಮುಂದಿನ ವಾಟರ್ ಟ್ಯಾಂಕ್ ಗೆ ಹಾರಿ ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಳ್ಳಾರಿಯ ಇಂದಿರಾ ನಗರದಲ್ಲಿ ನಡೆದಿದೆ.
ಇಂದಿರಾ ನಗರ ನಿವಾಸಿ ಸಿದ್ದಪ್ಪ ಅವರ ಪತ್ನಿ ಸುನೀತಾ (25) ಹಾಗೂ ಯಶವಂತ (4) ಹಾಗೂ ಸಾನ್ವಿ (3) ಮೃತಪಟ್ಟ ದುರ್ದೈವಿಗಳು.
ಕೌಟುಂಬಿಕ ಕಲಹದಿಂದಾಗಿ ತಾಯಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.