ನೂತನ ಕಟ್ಟಡ ನಿರ್ಮಾಣ ವೇಳೆ ಮಣ್ಣು ಕುಸಿದಿದ್ದರಿಂದ ಸಿಲುಕಿದ್ದ ಕಾರ್ಮಿಕನನ್ನು ರಕ್ಷಿಸಿದ ಘಟನೆ ಬೆಂಗಳೂರಿನ ಹನುಮಂತನಗರದ ಶಂಕರ್ ನಾಗ್ ವೃತ್ತದ ಕೆಂಪೇಗೌಡ ಲೇಔಟ್ ಬಳಿ ಸಂಭವಿಸಿದ್ದು, ಸ್ವಲ್ಪದರಲ್ಲೇ ದೊಡ್ಡ ದುರಂತವೊಂದು ತಪ್ಪಿದೆ.
ರಸ್ತೆ ಬದಿ ಮಣ್ಣು ತೆಗೆಯುತ್ತಿದ್ದರಿಂದ ಕುಸಿತ ಉಂಟಾಗಿದ್ದು, ಈ ವೇಳೆ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ್ನು ಕೂಡಲೇ ಸ್ಥಳೀಯರು ಸಮಯಪ್ರಜ್ಞೆ ತೋರಿ ರಕ್ಷಿಸಿದ್ದಾರೆ.
ಮಂತ್ರಿ ವಟಾರಕ್ಕೆ ಸೇರಿದ ಈ ಕಟ್ಟಡದ ಅಕ್ಕ ಪಕ್ಕದಲ್ಲೇ ನೂರಾರು ಮನೆಗಳಿದ್ದು, ಯಾವುದೇ ಹಾನಿಯಾಗಿಲ್ಲ. ಸ್ಥಳದಲ್ಲಿ ಬ್ಯಾರಿಗೇಟ್ ಹಾಕಿರುವ ಪೊಲೀಸರು ಸದ್ಯಕ್ಕೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಮಾಲೀಕರಿಗೆ ಸೂಚಿಸಿದ್ದಾರೆ.