ಸಿನಿಮಾ ಆಮಿಷ ಯುವತಿಯರ ನಗ್ನ ಚಿತ್ರೀಕರಣ : ಆರೋಪಿಗಳು ಅಂದರ್…!

ಮುಂಬೈ. ಸಿನಿಮಾದಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಬರುವ ಯುವತಿಯರನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಯುವತಿಯರ ಮಾನಹರಾಜು ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ಕರೆದೊಯ್ದು ನಗ್ನ ಚಿತ್ರಗಳನ್ನು ತೆಗೆಯುತ್ತಿದ್ದರು ಎನ್ನಲಾಗಿದೆ. ಈ ಕುರಿತಾಗಿ ಯುವತಿಯೊಬ್ಬಳು ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಂಡಾಗ ಸಿನಿತಂಡ ಇದಾಗಲೇ ಹಲವಾರು ಯುವತಿಯರಿಗೆ ಇದೇ ರೀತಿಯ ಆಮಿಷ ಒಡ್ಡಿ ಬೆತ್ತಲು ಮಾಡಿ ಚಿತ್ರೀಕರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಯುವತಿಯರನ್ನು ಪುಸಲಾಯಿಸಿ ನಂತರ ಅವರನ್ನು ನಗ್ನಗೊಳಿಸಿ ವಿಡಿಯೋ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಆನಂತರ ಆ ವಿಡಿಯೋಗಳನ್ನು ಪೋರ್ನ್ ವೆಬ್ಸೈಟ್ಗಳಿಗೆ ಅಪ್ಲೋಡ್ ಮಾಡಿ ಹಣಗಳಿಸುತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.
ಪೊಲೀಸರು ಮಲಾಡ್‌ನ ಮಾಧ್ ದ್ವೀಪದಲ್ಲಿರುವ ಗ್ರೀನ್ ಪಾರ್ಕ್ ಬಂಗಲೆಯ ಮೇಲೆ ದಾಳಿ ನಡೆಸಿ, ಯಾಸ್ಮಿನ್ ಬೇಗ್ ಖಾನ್ ಅಲಿಯಾಸ್ ರೋವಾ, ಪ್ರತಿಭಾ ನಲಾವಾಡೆ ,ಮೋನು ಗೋಪಾಲ್ದಾಸ್ ಜೋಶಿ,ಭಾನುಸೂರ್ಯಂ ಠಾಕೂರ್ , ಮತ್ತು ಮೊಹಮ್ಮದ್ ಆಸಿಫ್ ಅಲಿಯಾಸ್ ಸೈಫೈ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.