ಕೇವಲ 20 ರೂಪಾಯಿಗಾಗಿ ಮರ್ಡರ್ : ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತಾ..?

ಮಹಾರಾಷ್ಟ್ರ.: ಗ್ರಾಹಕ ಮತ್ತು ಇಡ್ಲಿ ಮಾರಾಟ ಮಾಡುವವನ ಮದ್ಯೆ ಕೇವಲ 20 ರೂಪಾಯಿಗಾಗಿ ವಾಗ್ವಾದ ನಡೆದಿದೆ.ಮಾತಿಗೆ ಮಾತು ಬೆಳೆದು ವ್ಯಕ್ತಿಯ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ. ಈ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ಶನಿವಾರ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನ ವೀರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಯಾದವ್ ಮೀರಾ ರೋಡ್‌ನಲ್ಲಿ ಇಡ್ಲಿ ಮಾರಾಟದ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ.
ಇಡ್ಲಿ ತಿನ್ನಲು ಬಂದಿದ್ದ ಮೂವರು ಗ್ರಾಹಕರು, ತಮಗೆ 20 ರೂಪಾಯಿ ನೀಡುವುದು ಬಾಕಿ ಇದೆ ಎಂದು ಹೇಳಿ ಯಾದವ್‌ನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದು ವಿಕೋಪಕ್ಕೆ ಹೋಗಿದೆ. ಕೈಕೈ ಮಿಲಾಸಿದ ನಂತರ, ಮೂವರು ಸೇರಿ ಆತನನ್ನು ನೂಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ನಂತರ ‘ಕೆಳಗೆ ಬಿದ್ದ ಯಾದವ್ ತಲೆಗೆ ಗಂಭೀರ ಗಾಯವಾಯಿತು. ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆತ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನ ವೀರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಯಾದವ್ ಮೀರಾ ರೋಡ್‌ನಲ್ಲಿ ಇಡ್ಲಿ ಮಾರಾಟದ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ.
ಇಡ್ಲಿ ತಿನ್ನಲು ಬಂದಿದ್ದ ಮೂವರು ಗ್ರಾಹಕರು, ತಮಗೆ 20 ರೂಪಾಯಿ ನೀಡುವುದು ಬಾಕಿ ಇದೆ ಎಂದು ಹೇಳಿ ಯಾದವ್‌ನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದು ವಿಕೋಪಕ್ಕೆ ಹೋಗಿದೆ. ಕೈಕೈ ಮಿಲಾಸಿದ ನಂತರ, ಮೂವರು ಸೇರಿ ಆತನನ್ನು ನೂಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ‘ಕೆಳಗೆ ಬಿದ್ದ ಯಾದವ್ ತಲೆಗೆ ಗಂಭೀರ ಗಾಯವಾಯಿತು. ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆತ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.