ಮರಕ್ಕೆ ಕಾರ್ ಡಿಕ್ಕಿ : ಇಬ್ಬರು ಸಾವು
ಮೈಸೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಮೈಸೂರು ಸಮೀಪದ ಉದ್ಬೂರು ಗೇಟ್ ಬಳಿ ನಡೆದಿದೆ.
ಮೈಸೂರು -ಹೆಚ್.ಡಿ. ಕೋಟೆ ರಸ್ತೆಯ ಉದ್ಬೂರು ಗೇಟ್ ಬಳಿ ಗಟ್ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಂದನ್ ಮತ್ತು ಶಿವಕುಮಾರ್ ಮೃತಪಟ್ಟಿದ್ದಾರೆನ್ನಲಾಗಿದೆ. ಮೈಸೂರಿನ ಜಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.