ಬೆಂಕಿ ಅವಘಡದಲ್ಲಿ ಸುಟ್ಟಿದ್ದು ಎನು ಗೊತ್ತಾ..?
ಮೈಸೂರು : ಪರ್ನಿಚರ್ಸ್ ಶಾಪ್ ಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಲಕ್ಷಾಂತರ ರೂ ಹಾನಿಯಾದ ಘಟನೆ ಮೈಸೂರು ಜಿಲ್ಲೆಯ ಹುಣಸೂರ ಪಟ್ಟಣದಲ್ಲಿ ನಡೆದಿದೆ.
ಸಮಿವುಲ್ಲಾ ರೆಹಮಾನ್ ಅವರಿಗೆ ಸೇರಿದ ಫರ್ನಿಚರ್ ಶಾಪ್ ನಲ್ಲಿ ಈ ಅವಘಡ ಸಂಭವಿಸಿದ್ದು, ಅಂಗಡಿಯಲ್ಲಿದ್ದ ಸೋಪಾ, ಚೇರ್, ಡೇನಿಂಗ್ ಟೆಬಲ್, ಮಂಚ, ದಿವಾನ ಕಾಟ್ ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಈ ಅಗ್ನಿ ಅನಾಹುತದಿಂದ ಅಕ್ಕ-ಪಕ್ಕದ ಶಾಪ್ ಗಳಿಗೆ ಬೆಂಕಿ ವ್ಯಾಪಿಸಿದ್ದು, ಇದರಿಂದ ಆ ಅಂಗಡಿಗಳಲ್ಲಿ ವಸ್ತುಗಳು ಸುಟ್ಟು ಕರಕಲಾಗಿವೆ.
ಈ ದುರಂತದಲ್ಲಿ ಸುಮಾರು 35 ಲಕ್ಷ ರೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.