ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅಪ್ರಾಪ್ತ ಸೇರಿದಂತೆ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರೂ ತಮಿಳುನಾಡು ಮೂಲದವರು ಎಂದು ಮೈಸೂರು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಜನ ಆರೋಪಿಗಳಲ್ಲಿ ಒಬ್ಬ ಕೂಲಿ, ಕಾರ್ಪೆಂಟರ್, ಚಾಲಕ ಈ ರೀತಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, 5, 7 ಮತ್ತು 8ನೇ ತರಗತಿ ಓದಿದವರಾಗಿದ್ದಾರೆ.
ಆಗಾಗ ತಮಿಳುನಾಡಿಗೆ ಬರುತ್ತಿದ್ದ ಇವರು ತರಕಾರಿ ತಗೊಂಡು ಬಂಡಿಪಾಳ್ಯ ಮಾರುಕಟ್ಟೆಗೆ ಬರುತ್ತಿದ್ದ ಜೋಡಿಯನ್ನು ಅಡ್ಡಗಟ್ಟಿ 3 ಲಕ್ಷ ರೂ. ವಸೂಲು ಮಾಡಲು ಯತ್ನಿಸಿದ್ದಾರೆ. ಹಣ ಸಿಗದೇ ಇದ್ದಾಗ ಯುವತಿಯ ಮೇಲೆ ಅತ್ಯಾಚಾರ ಮಾಡುವ ಹೀನ ಕೃತ್ಯ ಎಸಗಿದ್ದಾರೆ. ಬಂಧಿತರಲ್ಲಿ ಕೆಲವರು ಕ್ರಿಮಿನಲ್ ಹಿನ್ನೆಲೆ ಹೊಂದಿದ ಅನುಮಾನವಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪ್ರವೀಣ್ ಸೂದ್ ತಿಳಿಸಿದರು.