ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲೆಯಲ್ಲಿ ನಡೆದಿರುವ ಭೂ ಅಕ್ರಮಗಳ ತನಿಖಾಧಿಕಾರಿಯನ್ನಾಗಿ ನೇಮಿಸಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿದ್ದಾಗ ಮೈಸೂರು ಸುತ್ತಮುತ್ತ ಭೂ ಅಕ್ರಮ ಬಯಲಿಗೆಳೆದಿದ್ದಾರೆ. ವರ್ಗಾವಣೆಗೂ ಮುನ್ನ ನಾಲ್ಕು ಆದೇಶ ಹೊರಡಿಸಿದ್ದಾರೆ. ಇದರ ಬಗ್ಗೆ ಕ್ರಮ ಆಗಬೇಕು. ನಾಲ್ಕು ಆದೇಶಗಳನ್ನೂ ಜಾರಿಗೊಳಿಸುವಂತೆ ಮನವಿ ಮಾಡಿದ್ದೇನೆ ಎಂದರು.
ವಿಜಯ್ ಭಾಸ್ಕರ್ ಅವರಿಗೆ ವರದಿ ಪ್ರಕಾರ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದೇನೆ. ಮೈಸೂರು ಭೂ ಅಕ್ರಮದ ಬಗ್ಗೆ ರೋಹಿಣಿ ಸಿಂಧೂರಿಯನ್ನ ತನಿಖಾಧಿಕಾರಿಯನ್ನಾಗಿ ನೇಮಕ ಮಾಡಬೇಕು. ರೋಹಿಣಿ ಸಿಂಧೂರಿ ನೇಮಿಸುವಂತೆ ನಾಡಿದ್ದು ಸಿಎಸ್ ಭೇಟಿಯಾಗಲಿದ್ದೇನೆ ಎಂದು ಅವರು ಹೇಳಿದರು.
ಸಾ.ರಾ.ಮಹೇಶ್, ರಾಜೀವ್ ಇಬ್ಬರೂ ಬ್ಯುಸಿನೆಸ್ ಪಾಲುದಾರರು ಎಂಬುದು ನಿಜ. ಇವರಿಬ್ಬರು ಯಾವ್ ಉದ್ದಿಮೆಯಲ್ಲಿ ಎಷ್ಟು ಜನಕ್ಕೆ ಉದ್ಯೋಗ ಕೊಟ್ಟಿದ್ದಾರೆ? ರಿಯಲ್ ಎಸ್ಟೇಟ್ ಕೂಡ ಒಂದು ಉದ್ಯಮ. ಇವರಿಬ್ಬರು ಹಿಂದೆ ಹೇಗಿದ್ರು ಈಗ ಹೇಗಿದ್ದಾರೆ ಎಂದು ವಿಶ್ವನಾಥ್ ಪ್ರಶ್ನಿಸಿದರು.