ಚಿರತೆ ಪ್ರತ್ಯಕ್ಷ : ಜನರಲ್ಲಿ ಆತಂಕ
ಮೈಸೂರು : ವನ್ಯಮೃಗಗಳ ನಾಡಿಗೆ ಲಗ್ಗೆ ಇಡುವಂತ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿದ್ದರು, ಸಂಬಂಧಪಟ್ಟ ಇಲಾಖೆಯ ಸಿಬ್ಬಂಧಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಂತೆಯಿದೆ.
ರಾಜ್ಯ ಹಲವಡೆ ಈಗಾಗಲೇ ಚಿತರೆ ದಾಳಿ, ಚಿರತೆ ಪ್ರತ್ಯಕ್ಷ ಪ್ರಕರಣಗಳು ಮರಳಿಕಳಿಸಿವೆ. ಅದಕ್ಕೆ ಪೂರಕ ಎನ್ನುವಂತೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ತಾಲೂಕಿನ ದೊಡ್ಡಬ್ಯಾಲಾಳು ಗ್ರಾಮದ ಬಳಿ ಇರುವ ಪವರ್ ಪ್ಲಾಂಟೇಷನ್ ಬಳಿ ಕಾಣಿಸಿಕೊಂಡಿರುವ ಚಿರತೆಯಿಂದ ಜನ ಮನೆಯಿಂದ ಆಚೆ ಬರಲು ಹಿಂದೇಟು ಹಾಕುವಂತಾಗಿದೆ.
ಚಿರತೆಯನ್ನು ಕಂಡಿರುವ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಹಗಲು ಹೊತ್ತಿನಲ್ಲಿ ಗ್ರಾಮದ ಬಳಿ ದಾವಿಸಿ ಬಂದಿರುವ ಚಿರತೆಯ ಚಲನವಲನ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಅರಣ್ಯದಲ್ಲಿ ವನ್ಯ ಮೃಗಗಳಿಗೆ ಸಮರ್ಪಕ ಆಹಾರವಿಲ್ಲದೆ, ತಿನ್ನುವ ಆಹಾರ ಅರಸಿ ನಾಡಿನತ್ತ ಬರುತ್ತಿವೆ. ಇದರಿಂದ ಗ್ರಾಮಸ್ಥರು ತಮ್ಮ ಜೀವ ಕೈ ಹಿಡಿದು ಬದುಕುವಂತೆ ಆಗಿದ್ದು, ತಕ್ಷಣ ಚಿರತೆ ಹಿಡಿದು ಕಾಡಿಗೆ ಬಿಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.