ಮೈಸೂರು ಮೃಗಾಲಯಕ್ಕೆಎಂಟ್ರಿ ಕೊಡಲಿರುವ ವಿದೇಶಿ ಅತಿಥಿ ಯಾರು ಗೊತ್ತಾ…?

ಮೈಸೂರು. ಏಷ್ಯಾದಲ್ಲೇ ದೊಡ್ಡ ಮೃಗಾಲಯ ಎಂಬ ಹೆಗ್ಗಳಿಕೆ ಪಡೆದಿರೋ ಮೈಸೂರು ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಎಲ್ಲಾ ವರ್ಗದ ಪ್ರವಾಸಿಗರನ್ನು ಆಕರ್ಷಿಸುವ ಮೃಗಾಲಯದಲ್ಲಿ ಇದೀಗ ಹೊಸ ಅತಿಥಿಯ ಆಗಮನದ ನಿರೀಕ್ಷೆ ಎದುರಾಗಿದೆ.
ಮೈಸೂರಿಗೆ ಹೊಸ ಪ್ರಾಣಿಗಳು ಬರುವುದು ಅಪರೂಪವೇನಲ್ಲ. ಆದರೆ ಈ ಸಾರಿ ವಿದೇಶಿ ಅತಿಥಿಯೊಬ್ಬ ಬರುತ್ತಿದ್ದಾನೆ. ಈ ಸಾರಿ ಸಿಂಗಾಪುರದಿಂದ ಒರಾಂಗೂಟಾನ್ ಎನ್ನುವ ಗೊರಿಲ್ಲಾ ಪ್ರಭೇದದ ಪ್ರಾಣಿಯನ್ನು ತರಿಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಮೃಗಾಲಯದಲ್ಲಿ 70 ಲಕ್ಷ ರೂ.ವೆಚ್ಚದಲ್ಲಿ ಒರಾಂಗೂಟಾನ್‌ಗೆ ಮನೆ ನಿರ್ಮಾಣವಾಗುತ್ತಿದೆ.ಏಪ್ರಿಲ್ ಅಥವಾ ಮೇ ಹೊತ್ತಿಗೆ ಮನೆ ನಿರ್ಮಾಣ ಕಾರ್ಯ ಮುಗಿದರೆ ಮೇ ತಿಂಗಳಲ್ಲಿ ಸಿಂಗಾಪುರದಿಂದ ಒರಾಂಗೂಟಾನ್ ತರಲಾಗುವುದು. ಆಗ ದೇಶದಲ್ಲಿ ಒರಾಂಗೂಟಾನ್ ಇರುವ ಮೃಗಾಲಯ ನಮ್ಮದಾಗಲಿದೆ ಎಂದು ತಿಳಿಸಿದ್ದಾರೆ.