ನಾಡಪ್ರಭು ಕೆಂಪೇಗೌಡರು ಯಾರೊಬ್ಬರ ಸ್ವತ್ತಲ್ಲ – ಮಾಜಿ ಸಿಎಂ ಎಸ್ ಎಂ ಕೃಷ್ಣ

ನಾಡಪ್ರಭು ಕೆಂಪೇಗೌಡ (Nadaprabhu kempegowda) ರು ಯಾರೊಬ್ಬರ ಸ್ವತ್ತಲ್ಲ. ಅವರು ಇಡೀ ಜನಾಂಗದ ಸ್ವತ್ತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (SM. krishna) ಹೇಳಿದ್ದಾರೆ.ವಿಧಾನಸೌಧ (Vidhana soudha) ದ ಬ್ಯಾಂಕ್ವೆಟ್ ಹಾಲ್ (Banquet hall) ನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಅವರು, ದೇಶದ ಅತ್ಯಂತ ಹಿರಿಯ ಸ್ವಾತಂತ್ರ್ಯ ಯೋಧ ಕೆಂಪೇಗೌಡ ಎಂದು ಬಣ್ಣಿಸಿದರು.

ಬೆಂಗಳೂರ (Bengaluru) ನ್ನು ಸುಂದರವಾಗಿ ಮಾಡಲು ಅವರು ಶ್ರಮಿಸಿದ್ದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಟ್ಟಿದ್ದಕ್ಕೆ ಅಂದಿನ ಪ್ರಧಾನಿಯಾಗಿದ್ದ ಮನಹೋಹನ್ ಸಿಂಗ್ (Manmohan singh) ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನದ ವೇಳೆ ನೀಡಲಾಗಿದ್ದ ಐದುವರೆ ಲಕ್ಷ ರೂಪಾಯಿ ಚೆಕ್ ಅನ್ನು ಮೈಸೂರು ರಾಮಕೃಷ್ಣ ಆಶ್ರಮಕ್ಕೆ ಕೊಡುಗೆಯಾಗಿ ಎಸ್. ಎಂ ಕೃಷ್ಣ ನೀಡಿದರು. ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ (Narayana murthy) ವಿಡಿಯೋ ಮೂಲಕ ಸಂದೇಶ ನೀಡಿದ್ರು. ಕೆಂಪೇಗೌಡರ ಪ್ರಶಸ್ತಿ (kempegowda award) ನನಗೆ ಪ್ರಮುಖ ಹಾಗೂ ಬಹಳ ಆನಂದವಾಗಿದೆ. ಅದರ ಮೌಲ್ಯ ಗಳಿಸಲು ಬಹಳ ಕಷ್ಟ. ರಾಜ್ಯದ ರಾಜಕಾರಣಿಗಳು, ಅಧಿಕಾರಿಗಳು, ಹಾಗೂ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ವಿಡಿಯೋ ಸಂದೇಶದ ಮೂಲಕ ಪ್ರಶಸ್ತಿ ಪಡೆದಿದ್ದಕ್ಕೆ ಧನ್ಯವಾದ ತಿಳಿಸಿದರು.  ಇದನ್ನೂ ಓದಿ : – ಮಹಾರಾಷ್ಟ್ರ ಬಿಕ್ಕಟ್ಟು- ಏಕನಾಥ್ ಶಿಂಧೆ ಟೀಂನ ಅನರ್ಹತೆ ನೊಟೀಸ್- ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ

ಸಮಾರಂಭದಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ (Sudhamurthy) ಮಾತನಾಡಿ, ಇವತ್ತು ಐಟಿ ಬರದೇ ಇರುತ್ತಿದ್ದರೆ ಟ್ರಾಫಿಕ್ ಜಾಮ್ ಇರುತ್ತಿರಲಿಲ್ಲ. ಆದರೆ ನಮ್ಮ ಮಕ್ಕಳು ನಮ್ಮ ಜೊತೆಯೇ ಇದ್ದಾರೆ. ಮೊದಲೆಲ್ಲಾ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗಬೇಕಿತ್ತು. ಈಗ ನಮ್ಮ ಮಕ್ಕಳಿಗೆ ಇಲ್ಲೇ ಉದ್ಯೋಗ ಸಿಕ್ಕಿ, ನಮ್ಮ ಜೊತೆಯೇ ಇದ್ದು ಕನ್ನಡದ ಹುಡುಗಿಯರನ್ನೇ ಮದುವೆಯಾಗುತ್ತಿದ್ದಾರೆ ಎಂದು ಹೇಳಿದ್ರು ಇನ್ನು ಐಟಿ ಬೆಳವಣಿಗೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಹುಬ್ಬಳ್ಳಿಯ(Hubbalii) ಲ್ಲಿ ಕೂಡಾ ಬೆಂಗಳೂರಿನ ರೀತಿ ಅಭಿವೃದ್ಧಿ ಆಗಲಿ ಅಂತಾ ಸಿಎಂ ಬೊಮ್ಮಾಯಿ (Bommai) ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಮಾಜಿ ಸಿಎಂ ಎಸ್ ಎಂ ಕೃಷ್ಣ, ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹಾಗೂ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ ಪಡುಕೋಣೆ (Prakash padukone) ಅವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾರಾಯಣಮೂರ್ತಿ ಪರವಾಗಿ ಸುಧಾ ನಾರಾಯಣಮೂರ್ತಿ, ಪಡುಕೋಣೆ ಪರವಾಗಿ ವಿಪುಲಕುಮಾರ ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ ಡಾ. ನಿರ್ಮಲಾನಂದ ಮಹಾಸ್ವಾಮಿ (Niramalananda swami) ಗಳು, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಸಚಿವರಾದ ಡಾ. ಸಿ ಎನ್ ಅಶ್ವತ್ಥ ನಾರಾಯಣ (Ashwath narayan) , ಆರ್ ಅಶೋಕ (Ashok) , ಕೆ. ಗೋಪಾಲಯ್ಯ, ಸುನಿಲ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಮುನಿರತ್ನ ಮತ್ತು ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ : –   ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಯಶವಂತ್ ಸಿನ್ಹಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!