ಬೆಂಗಳೂರಿನ ಮಹದೇವಪುರ ಕ್ಷೇತ್ರದ ಬೈರತಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಳಿಸಲಾದ ಶ್ರೀ ನಂದಿಕೇಶ್ವರ ಸ್ವಾಮಿ ದೇವಾಲಯವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಭೂಮಿಯ ಮೇಲಿನ ದುಷ್ಟ ಶಕ್ತಿಗಳನ್ನು ಲಯ ಮಾಡುವಂತಹ ಶಕ್ತಿ ಶಿವನಿಗೆ ಮಾತ್ರ ಇರೋದು ಎಂದು ಹೇಳಿದ್ರು.
ಶಿವನನ್ನು ಆರಾಧಿಸುವುದರಿಂದ ಸುತ್ತಲಿನ ದುಷ್ಟ ಶಕ್ತಿ ನಾಶವಾಗಿ, ಸುಖ, ಶಾಂತಿ, ಸಮೃದ್ಧಿ ದೊರೆಯಲಿದೆ ಎಂದು ತಿಳಿಸಿದ್ರು. ನಂದಿಕೇಶ್ವರ ಸ್ವಾಮಿ ದೇವಾಲಯವನ್ನು ಭವ್ಯವಾಗಿ ನಿರ್ಮಾಣವಾಗಿದ್ದಕ್ಕಾಗಿ ಬೈರತಿ ಬ್ರದರ್ಸ್ ಗೆ ಅಭಿನಂದನೆ ತಿಳಿಸಿದರು. ಅಷ್ಟೇ ಅಲ್ಲದೆ ಎಂದಿಗೂ ಬೈರತಿ ಸಹೋದರರ ಕೈ ಭೂಮಿಯನ್ನು ನೋಡಲಿ. ಆಕಾಶವನ್ನು ನೋಡದಿರಲಿ ಹಾಗೂ ಬೈರತಿ ಕುಟುಂಬದ ಭವಿಷ್ಯ ಪೀಳಿಗೆಗೆ ಶಕ್ತಿ ನೀಡಲಿ ಎಂದು ನಂದಿಕೇಶ್ವರನಲ್ಲಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್, ಹಾಗೂ ಶಾಸಕರಾದ ಬೈರತಿ ಸುರೇಶ್ ಉಪಸ್ಥಿತರಿದ್ದರು