ದಕ್ಷಿಣ ಭಾರತದ ಖ್ಯಾತ ನಟಿ, ಲೇಡಿ ಸೂಪರ್‌ಸ್ಟಾರ್ ನಯನತಾರಾ (NAYANATHARA )ಸಾಕಷ್ಟು ಸಮಯದಿಂದ ಡೇಟಿಂಗ್ ಮಾಡುತ್ತಿರುವ ನಿರ್ದೇಶಕ ವಿಘ್ನೇಶ್ ಶಿವನ್ (VIGNESH SHIVAN )ಜೊತೆ ಮುಂದಿನ ತಿಂಗಳು ಮದುವೆಯಾಗಲಿದ್ದಾರೆ.
ಜೂನ್ 9 ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಆಂಧ್ರಪ್ರದೇಶದ ತಿರುಮಲ ತಿರುಪತಿಯಲ್ಲಿ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ನಯನತಾರಾ, ವಿಘ್ನೇಶ್ ಅವರ ಇತ್ತೀಚಿನ ತಿರುಮಲ ದೇವಸ್ಥಾನ ಭೇಟಿ ಹೆಚ್ಚು ಕುತೂಹಲ ಮೂಡಿಸಿದ್ದು, ವಿವಾಹವಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿದೆ. ವಿಘ್ನೇಶ್ ಶಿವನ್ ಅವರ ಕಾತುವಾಕುಲ ರೆಂಡು ಕಾದಲ್ ಸಿನಿಮಾದಲ್ಲಿ ನಯನತಾರಾ ನಟಿಸಿದ್ದಾರೆ. ಅದನ್ನು ಅವರೇ ನಿರ್ಮಿಸಿದ್ದಾರೆ. ಇದನ್ನೂಓದಿ :- ನನಗೆ ಯಾವುದೆ ಖಾತೆ ಕೊಟ್ಟರು ನಿಭಾಯಿಸುತ್ತೇನೆ – ಎಂಟಿಬಿ ನಾಗರಾಜ್
ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ಸಮಂತಾ ಕೂಡ ಅಭಿನಯಿಸಿದ್ದಾರೆ. ಇದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಿಮಿತ್ತ ಇವರಿಬ್ಬರು ದೇವಾಲಯಕ್ಕೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ. ಇದನ್ನೂಓದಿ :- ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಿ.ಟಿ ರವಿ