ತಮ್ಮ ದೇಶದ ಮೇಲೆ ದಾಳಿ ನಡೆಸುತ್ತಿರುವ ರಷ್ಯಾದ 6000 ಯೋಧರನ್ನು ಇದುವರೆಗೆ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಡೊಮಿಲರ್ ಜೆಲೆನ್ ಸ್ಕಿ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ 7ನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ 6 ದಿನಗಳಲ್ಲಿ 6 ಸಾವಿರಕ್ಕೂ ಅಧಿಕ ರಷ್ಯಾ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಮಂಗಳವಾರ ಘೋಷಿಸಿದ್ದಾರೆ.
ರಷ್ಯಾ ಕೂಡ ಶೆಲ್ ಮತ್ತು ಬಾಂಬ್ ದಾಳಿ ತೀವ್ರಗೊಳಿಸಿದ್ದು, ಕೀವ್ ಮತ್ತು ಖಾರ್ಕಿವ್ ಮೇಲೆ ದಾಳಿ ಹೆಚ್ಚಿಸಿದ್ದು, ಖಾರ್ಕಿವ್ ಬಹುತೇಕ ವಶಪಡಿಸಿಕೊಳ್ಳಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.