ಕೆಲವು ವಿದೇಶೀ ಪ್ರಯಾಣಿಕರಲ್ಲಿ ಮತ್ತೊಂದು ರೂಪಾಂತರ ಪಡೆದ ಕೊರೊನಾ ಸೋಂಕನ್ನು ಪುಣೆಯ ರಾಷ್ಟ್ರೀಯ ಇನ್ಸಿಟಿಟ್ಯೂಟ್ ಆಫ್ ವಿರೋಲಜಿ ಸಂಸ್ಥೆ (ನೀವ್) ಪತ್ತೆ ಹಚ್ಚಿದೆ.
ಬ್ರೆಜಿಲ್ ಮತ್ತು ಇಂಗ್ಲೆಂಡ್ ನಿಂದ ಭಾರತಕ್ಕೆ ಆಗಮಿಸಿದ ವಿದೇಶೀ ಪ್ರಯಾಣಿಕರಲ್ಲಿ B.1.1.28.2 ಎಂದು ರೂಪಾಂತರಿ ಕೊರೊನಾವನ್ನು ಪತ್ತೆ ಆಗಿದೆ ಎಂದು ನೀವ್ ಹೇಳಿದೆ.
ಭಾರತದಲ್ಲಿ ಅತ್ಯಂತ ಹೆಚ್ಚು ಜೀವಗಳನ್ನು ಪಡೆದ ಕೊರೊನಾ ಎರಡನೇ ಅಲೆಯಲ್ಲಿ ಪತ್ತೆಯಾದ SARS-cov-2ನ B.1.617 ಸೋಂಕಿಗಿಂತ ಇದು ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ 10 ಲ್ಯಾಬೋರೇಟರಿಗಳಲ್ಲಿ ಗುಣಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ನೀವ್ ವಿವರಿಸಿದೆ.