ನವದೆಹಲಿ: ನಿನ್ನೆ 2021-22 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಯಿತು. ಮೂರನೇ ಬಾರಿ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಟ್ಯಾಕ್ಸ್ ಫ್ರೀ ರಿಟರ್ನ್ಸ್ ಪಡೆಯಲು ಪ್ರಾವಿಡೆಂಟ್ ಫಂಡ್ ಮೇಲೆ ಮಾಡುವ ಹೂಡಿಕೆಯನ್ನು ಮಿತಿಗೊಳಿಸಿದ್ದಾರೆ. ಇದುವರೆಗೂ ಇದ್ದ 7.5 ಲಕ್ಷ ರೂ. ಗಳ ಮಿತಿ ಈ ಬಾರಿಯ ಬಜೆಟ್ ನಲ್ಲಿ 2.5 ಲಕ್ಷಕ್ಕಿಳಿಸಲಾಗಿದೆ.
ವಾರ್ಷಿಕವಾಗಿ ನೀವು ಕೆಲಸ ಮಾಡುವ ಸಂಸ್ಥೆಗಳು 2.5 ಲಕ್ಷ ರೂ.ಗಿಂತ ಅಧಿಕ ಹಣವನ್ನು ಪಿಎಫ್ ಖಾತೆಯಲ್ಲಿ ಹಾಕಿದರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ಇದರ ಜೊತೆಗೆ ನಿವೃತ್ತಿ ಪಿಂಚಣಿಯೂ ಕಡಿಮೆ ಸಿಗಲಿದೆ. ಇದಲ್ಲದೇ, ಈಗಾಗಲೇ ಲೋಕಸಬೆಯಲ್ಲಿ ಅನುಮೋದನೆ ಪಡೆದಿರುವ ನೂತನ ವೇತನ ಸಂಹಿತೆ ಜಾರಿಗೆ ಬಂದರೆ ಉದ್ಯೋಗಿಗಳ ಸಂಬಳಕ್ಕೆ ಕತ್ತರಿ ಬೀಳಲಿದೆ. ನೂತನ ಕಾಯ್ದೆಯ ಅನ್ವಯ ಕಂಪನಿ ನೌಕರರಿಗೆ ನೀಡುವ ಭತ್ಯೆಯ ಪ್ರಮಾಣದಲ್ಲಿ ಶೇ.50 ರಷ್ಟು ಭತ್ಯೆಗೆ ಕತ್ತರಿ ಬೀಳಲಿದೆ. ಅಲ್ಲದೇ ಉದ್ಯೋಗಿಗಳಿಗೆ ನೀಡುವ ಪಿಎಫ್ ಪ್ರಮಾಣವನ್ನು ಹೆಚ್ಚಿಸಲಿರುವುದರಿಂದ ಒಟ್ಟಾರೆಯಾಗಿ ಕೈಗೆ ಸಿಗುವ ಸಂಬಳಕ್ಕೆ ಕುತ್ತು ಬರಲಿದೆ.