ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮನ್ ಡೆವೊನ್ ಕಾನ್ ವೇ ಲಾರ್ಡ್ಸ್ ಮೈದಾನದಲ್ಲಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೆಸರಿನಲ್ಲಿದ್ದ 25 ವರ್ಷದ ಹಿಂದಿನ ದಾಖಲೆಯನ್ನೂ ಮುರಿದ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಡೆವೊನ್ ಕಾನ್ ವೇ ಶತಕ ಸಿಡಿಸಿದರು. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ವಿಶ್ವದ 6ನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಡೆವೊನ್ ಸಿಡಿಸಿದ 136 ರನ್ ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ ಮೇಲುಗೈ ಸಾಧಿಸಿದೆ. ಡೆವೊನ್ 1996ರಲ್ಲಿ ಲಾರ್ಡ್ಸ್ ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ 131 ರನ್ ಗಳಿಸಿದ್ದರು. ಡೆವೊನ್ ಈ ದಾಖನೆಯನ್ನು ಹಿಂದಿಕ್ಕಿದರು. ವಿಶೇಷ ಅಂದರೆ ಗಂಗೂಲಿ ಮತ್ತು ಕಾನ್ ವೇ ಇಬ್ಬರ ಜನ್ಮದಿನವೂ ಜುಲೈ 28 ಆಗಿದೆ.
ಲಾರ್ಡ್ಸ್ ಮೈದಾನದಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಇಂಗ್ಲೆಂಡೇತರ ಮೂರನೇ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾದ ಹ್ಯಾರಿ ಗ್ರಾಹಂ ಮತ್ತು ಸೌರವ್ ಗಂಗೂಲಿ ಮಾತ್ರ ಈ ಸಾಧನೆ ಮಾಡಿದ್ದರು.