ರಾಷ್ಟ್ರ ಧ್ವಜಕ್ಕೆ ಅವಮಾನಿಸಿದ ದೀಪ್ ಸಿಧು ಬಂಧನ : ಆರೋಪಿಗೆ ಬಿಜೆಪಿ ನಂಟು

ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ, ರೈತರು ಹೋರಾಟದಲ್ಲಿ ಗಲಭೆ ಎಬ್ಬಿಸಿದ ಪ್ರಮುಖ ಆರೋಪಿ ಪಂಜಾಬಿ ನಟ ದೀಪ್ ಸಿಧುವನ್ನು ಮಂಗಳವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ನಡೆದಿತ್ತು. ಈ ಸಂದರ್ಭದಲ್ಲಿ ಕೆಂಪು ಕೋಟೆ ಮೇಲೆ ಏರಿ ಸಿಖ್ ಧ್ವಜ ಹಾರಿಸಿದ ಹಾಗೂ ಗಲಭೆಯೆಬ್ಬಿಸುವಂತೆ ರೈತರನ್ನು ಹುರಿದುಂಬಿಸಿದ್ದು ಆರೋಪ ದೀಪ್ ಸಿಧು ಮೇಲಿತ್ತು.
ಅಂದಿನ ಘಟನೆ ಬಳಿಕ ಕೆಂಪು ಕೋಟೆ ಬಳಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಹಲವರಿಗೆ ಗಾಯಗಳಾಗಿತ್ತು, ಸಾಕಷ್ಟು ಆಸ್ತಿಪಾಸ್ತಿಗಳು ನಷ್ಟವಾಗಿದ್ದವು. ಇದರ ಜೊತೆಗೆ ರಾಷ್ಟ್ರ ಧ್ವಜಕ್ಕೆ ಅವಮಾನ ಘಟನೆ ಬಳಿಕ ರೈತರವನ್ನು ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಸಹ ನಡೆದಿತ್ತು. ಈ ಘಟನೆಯ ಬಳಿಕ ರೈತರ ಹೋರಾಟಕ್ಕೆ ವಿದೇಶಿಗರ ಕುಮ್ಮಕ್ಕು ಇದೆ ಎಂದು ಆರೋಪ ಸಹ ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ರೈತರನ್ನು ಭಯೋತ್ಪಾದಕರಿಗೆ ಹೊಲಿಕೆ ಮಾಡಿದ್ದರು.
ಬಳಿಕ ಕೆಂಪು ಕೋಟೆ ಮುಂದಿನ ಗಲಭೆಗೆ ಹಾಗೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಕೃತ್ಯದ ಹಿಂದೆ ಪಂಜಾಬಿ ನಟ ದೀಪ್ ಸಿಧು ಹೆಸರು ತೆಲಿ ಬಂದಾಗ ಅಂದಿನಿಂದ ಆತ ತಲೆಮರೆಸಿಕೊಂಡಿದ್ದ. ಆದಾದ ಬಳಿಕ ರೈತರ ಗಲಭೆ ಹಿಂದೆ ಬಿಜೆಪಿಯೊಂದಿಗೆ ನಂಟು ಹೊಂದಿರುವ ವ್ಯಕ್ತಿ ಇರುವುದು ಖಾತ್ರಿಯಾಯಿತು. ಆಗ ಸಮಾಜಿಕ ಜಾಲತಾಣದಲ್ಲಿ ಇದರ ಚರ್ಚೆ ಕುಗ್ಗಿತು. ಬಳಿಕ ದೆಹಲಿ ಪೊಲೀಸರು ಈತನ ಪತ್ತೆಗಾಗಿ ಲುಕ್ ಔಟ್ ನೊಟೀಸ್ ಹೊರಡಿಸಿದ್ದರು.
ಅಂದಿನ ಅಹಿತಕರ ಘಟನೆಗೆ ಕಾರಣವಾಗಿರುವ ದೀಪ್ ಸಿಧುಗೆ ಬಿಜೆಪಿ ನಂಟಿದೆ. ಈತ ಪ್ರಧಾನಿ ಮೋದಿಯವರೊಂದಿಗೆ ನಿಂತುಕೊಂಡಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸಂಸದ ನಟ ಸನ್ನಿ ಡಿಯೋಲ್ ಪರ ಪ್ರಚಾರದ ಮ್ಯಾನೇಜರ್ ಆಗಿದ್ದ ಎಂಬುದು ಸತ್ಯ. ಈ ಎಲ್ಲ ಘಟನೆಗಳಿಂದ ರೈತರ ಹೋರಾಟವನ್ನು ದಾರಿ ತಪ್ಪಿಸಲು ಬಿಜೆಪಿ ಸಂಚು ರೂಪಿಸಿತ್ತು ಎಂದು ಹೋರಾಟಗಾರರು ಆರೋಪಿಸಿದ್ದರು. ರೈತರ ಮಾಡಿರುವ ಆರೋಪಕ್ಕೆ ಪುಷ್ಠಿ ಎನ್ನುವಂತೆ ದೀಪ್ ಸಿಧು ಅವರು ಗಣರಾಜ್ಯೋತ್ಸವ ದಿನದಂದು ಗಲಭೆ ಎಬ್ಬಿಸಿದರೇ ಎಂಬುದು ಪೊಲೀಸರ ತನಿಕೆಯಿಂದ ಹೊರಬರಬೇಕಿದೆ.