ನವದೆಹಲಿ: ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿಗೆ ತಿರ್ಮಾನ ಮಾಡಲಾಗಿದ್ದು, ಅದರ ಜೊತೆಗೆ 15 ವರ್ಷಗಳ ಹಳೆ ವಾಹನ ಗುಜರಿಗೆ ಹಾಕಲಾಗುವುದು ಎನ್ನುವು ಮೂಲಕ ವಾಹನಗಳ ಓನರ್ ಗಳಿಗೆ ಶಾಕ್ ನೀಡಿದೆ.
ಕೊರೊನಾ ಆರ್ಥಿಕ ಸಂಕಷ್ಟದ ನಡುವೆ ಕೇಂದ್ರ ಸರ್ಕಾರ ದೇಶದ ವಾಹನ ಬಳಕೆ ದಾರರಿಗೆ ಶಾಕ್ ನೀಡಿದೆ. 15 ವರ್ಷದ ಹಳೆ ವಾಣಿಜ್ಯ ವಾಹನಗಳು, ಹಾಗೂ 20 ವರ್ಷದ ವೈಯಕ್ತಿಕ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವಂತೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ 2021-22ನೇ ಸಾಲಿನ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡನೆ ವೇಳೆ ತಿಳಿದ್ದು, ಮಾಲಿನ್ಯ ನಿಯಂತ್ರಣಕ್ಕಾಗಿ ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವಂತೆ ದೇಶದ ಜನತೆಗೆ ಮನವಿ ಕರೆ ನೀಡಿದ್ದಾರೆ. ಅಲ್ಲದೇ, ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುತ್ತೇವೆ ಎಂದಿದ್ದಾರೆ.
ಹಿರಿಯ ನಾಗರೀಕರು ಕೂಡ ತೆರಿಗೆ ಕಟ್ಟಬೇಕಾಗಿತ್ತು. ಆದ್ರೆ ಇನ್ಮೇಲೆ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ ಅಂತಾ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಬಜೆಟ್ ಮಂಡನೆ ವೇಳೆ ಹಿರಿಯ ನಾಗರಿಕರು ಪಾವತಿ ಮಾಡುವ ತೆರಿಗೆ ವಿಚಾರ ಪ್ರಸ್ತಾಪಿಸಿ ಮಾಹಿತಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಮುಂದೆ ಹಿರಿಯ ನಾಗರಿಕರಿಗೆ ಟ್ಯಾಕ್ಸ್ ವಿಚಾರದಲ್ಲಿ ವಿನಾಯಿತಿ ನೀಡಲಾಗುವುದು ಎಂದಿದ್ದಾರೆ.
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಸಲು ನಿರ್ಧರಿಸಲಾಗಿದೆ ಸಚಿವರು ಘೋಷಣೆ ಮಾಡಿದ್ದಾರೆ. ಜನಗಣತಿಗಾಗಿ ರೂ. 3,768 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂಬುದನ್ನು ಖಾತ್ರಿ ಪಡಿಸಿದ್ದಾರೆ.