40 ಕೋಟಿ ಜನರಿಗೆ ಆರ್ಥಿಕ ನೆರವು ನೀಡಿದ್ದು ಕೇಂದ್ರದ ಹೆಗ್ಗಳಿಕೆ:

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22 ನೇ ಸಾಲಿನ ಬಹುನಿರೀಕ್ಷಿತ ಬಜೆಟ್ ಮಂಡಿಸುತ್ತಿದ್ದು, ಈ ವರ್ಷದ ಬಜೆಟ್ ದೇಶದ ಜನತೆಯ ನೆರವಿಗೆ ಸಹಕಾರಿಯಾಗಲಿದ್ದು, ಈಗಾಗಲೇ 40 ಕೋಟಿ ಜನರಿಗೆ ಹಣದ ನೆರವು ನೀಡಿರುವ ಹೆಗ್ಗಳಿಕೆ ಕೇಂದ್ರ ಸರ್ಕಾರದ್ದಾಗಿದೆ ಎಂದಿದ್ದಾರೆ.
ಕಳೆದ ವರ್ಷ ಸರ್ಕಾರವು ಆತ್ಮ ನಿರ್ಭರದ ಪ್ಯಾಕೇಜ್ ಘೋಷಿಸಿತ್ತು. ಲಾಕ್ ಡೌನ್ ನಿಂದಾಗಿ ಆರ್ಥಿಕತೆ ಸುಧಾರಿಸಲು 2.71 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ನಂತರ 5 ಸಣ್ಣ ಬಜೆಟ್ ಮಂಡಿಸಲಾಗಿತ್ತು. ಇದರಿಂದ ದೇಶದ ಜನರಿಗೆ ಆರ್ಥಿಕ ಮಟ್ಟ ಸುಧಾರಿಸಲು ಅನುಕೂಲವಾಗಿತ್ತು ಎಂದಿದ್ದಾರೆ. ಇದರ ಜೊತೆಗೆ
ದೇಶದಲ್ಲಿ ಈಗಾಗಲೇ ಎರಡು ಕೊರೋನಾ ಲಸಿಕೆ ಹೊಂದಿದ್ದು, ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಕೊರೋನಾ ವಿರುದ್ಧ ಹೋರಾಡಲು ಭಾರತ ನೆರವಾಗಿದೆ. ಇದು ಭಾರತ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.