ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರದ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಮೇಲಿನ ಶೇ.5ರಷ್ಟು ತೆರಿಗೆಯನ್ನು ಮುಂದುವರಿಸಲಾಗಿದ್ದು, ಬ್ಲ್ಯಾಕ್ ಫಂಗಸ್ ಔಷಧಿ ಮೇಲಿನ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ.
ಶನಿವಾರ ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ತೆರಿಗೆ ಕಡಿತ ಕುರಿತು ಶಿಫಾರಸುಗಳನ್ನು ಪರಿಗಣಿಸಲಾಗಿದ್ದು, ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಆಕ್ಸಿಮೀಟರ್ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದೆ. ಆಂಬುಲೆನ್ಸ್ ಮೇಲಿನ ತೆರಿಗೆಯನ್ನು ಶೇ.28ರಿಂದ 12ಕ್ಕೆ ಕಡಿತಗೊಳಿಸಲಾಗಿದೆ.
4 ಉತ್ಪನ್ನ ವಿಭಾಗಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸಲಾಗಿದೆ. ಔಷಧಿ, ಆಕ್ಸಿಜನ್, ಆಕ್ಸಿಜನ್ ಜನರೇಷನ್ ಉಪಕರಣ, ಟೆಸ್ಟಿಂಗ್ ಕಿಟ್ ಮತ್ತು ಇತರೆ ಉಪಕರಣಗಳೆಂದು ವಿಂಗಡಿಸಲಾಗಿದೆ. ಇವುಗಳ ಬಳಕೆಯ ಆದ್ಯತೆ ಮೇಲೆ ಜಿಎಸ್ ಟಿ ಕಡಿತ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.