ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ತಗ್ಗಿದ ಹಿನ್ನೆಲೆಯಲ್ಲಿ ಸಿನಿಯಾ ಥಿಯೇಟರ್ ಗೆ ಸರಕಾರ ಶೇ.100ರಷ್ಟು ಆಸನ ಭರ್ತಿಗೆ ಅನುಮತಿ ನೀಡಿದ ಬೆನ್ನಲ್ಲೇ ವರ್ಷಗಳಿಂದ ಕಾದು ನಿಂತಿದ್ದ ಬಿಗ್ ಬಜೆಟ್ ನ ಸಾಲು ಸಾಲು ಚಿತ್ರಗಳು ಬಿಡುಗಡೆ ಆಗಲಿವೆ.
ಅಕ್ಟೋಬರ್ 1ರಿಂದ ಸ್ಟಾರ್ ನಟರು ಅಭಿನಯಿಸಿರುವ ಹಾಗೂ ಬಿಗ್ ಬಜೆಟ್ ನ ಚಿತ್ರಗಳು ಬಿಡುಗಡೆ ಆಗಲಿವೆ. ಒಂದು ವರ್ಷದಿಂದ ಚಿತ್ರ ಬಿಡುಗಡೆಗೆ ಕಾದಿದ್ದ ನಿರ್ಮಾಪಕರು ಪರಸ್ಪರ ಮಾತುಕತೆ ಮೂಲಕ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಪಡಿಸಿದ್ದು, ಇಂದು ಅಂತಿಮಗೊಳಿಸಲಿದ್ದಾರೆ.
ಅಕ್ಟೋಬರ್ 14ರಂದು ದುನಿಯಾ ವಿಜಯ್ ಅಭಿನಯಿಸಿ ಮೊದಲ ಬಾರಿ ನಿರ್ದೇಶಿಸಿರುವ ಸಲಗ ಬಿಡುಗಡೆ ಆಗಲಿದ್ದರೆ, ಅ.15ರಂದು ಸುದೀಪ್ ಅಭಿನಯದ ಕೋಟಿಗೊಬ್ಬ-3 ಹಾಗೂ ಅಕ್ಟೋಬರ್ 29ರಂದು ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಹರ್ಷ ಕಾಂಬಿನೇಷನ್ ನ ಭಜರಂಗಿ-2 ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರ ತಂಡಗಳು ಘೋಷಿಸಿವೆ.